ಶ್ರೀಘ್ರವೇ ಪೂರ್ಣ ಪ್ರಮಾಣದ ವಿಮಾನ ನಿರ್ಮಾಣ: ಸಿಎಂ ಬಸವರಾಜ ಬೊಮ್ಮಾಯಿ ಆಶಯ

1
Published on

ಬೆಂಗಳೂರು ಗ್ರಾಮಾಂತರ: ಬೆಂಗಳೂರು ನಗರ ದೇಶದಲ್ಲೆ ವಿಮಾನ ನಿರ್ಮಾಣಕ್ಕೆ ಬೇಕಾಗುವ ಅಗತ್ಯತೆಗಳನ್ನು ಪೂರೈಸುವ ಪ್ರಮುಖ ತಾಣವಾಗಿದ್ದು, ಅತಿ ಶ್ರೀದಲ್ಲಿಯೇ ಪೂರ್ಣ ಪ್ರಮಾಣದ ವಿಮಾನ ನಿರ್ಮಿಸುವ ಕಾರ್ಯಕ್ಕೂ ಸಾಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಕೆಐಎಡಿಬಿ ಪ್ರದೇಶದಲ್ಲಿ ಸಫ್ರಾನ್​ ಗ್ರೂಪ್​ ಹಾಗೂ ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​ ಶುಕ್ರವಾರ ಆಯೋಜಿಸಿದ್ದ ಸಫ್ರಾನ್​ ಹಾಲ್​ ಏರ್​ಕ್ರಾಫ್ಟ್ ಇಂಜಿನ್​ ಸೌಲಭ್ಯ ಟಕ ಉದ್ಘಾಟಿಸಿ ಮಾತನಾಡಿದರು.


ಬೆಂಗಳೂರು ನಗರದಲ್ಲಿ ಎಚ್​ಎಎಲ್​., ಇಸ್ರೋ, ಎನ್​ಎಎಲ್​., ಎಚ್​ಎಂಟಿ., ಬಿಎಚ್​ಇಎಲ್​ ನಂತಹ ಮತ್ತಿತರ ಸಂಸ್ಥೆಗಳು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ತಾಂತ್ರಿಕತೆ ತಂದಂತಹ ಮುಂಚೂಣಿ ಸಂಸ್ಥೆಗಳಾಗಿವೆ ಎಂದರು.


ಮನುಷ್ಯನ ಜೀವನಕ್ಕೂ ತಾಂತ್ರಿಕತೆ ಅಗತ್ಯವಾಗಿದ್ದು, ತಾಂತ್ರಿಕತೆ ಎಂಬುದು ಮನುಷ್ಯನ ಜೀವನವನ್ನು ಆಸಕ್ತಿಕರ ಹಾಗೂ ಸಾಹಸಮಯವಾಗಿಸುವ ಸಾಧನವಾಗಿದೆ. ದೇಶದ ಬೆಳವಣಿಗೆಯಲ್ಲಿ ತಾಂತ್ರಿಕತೆ ಎಂಬುದು ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದರು.


ಏರೋಸ್ಪೇಸ್​ ತಂತ್ರಾನ ಎಂಬುದು ವಿಭಿನ್ನವಾದ ತಾಂತ್ರಿಕತೆ ಹೊಂದಿದೆ. ರೈಟ್​ ಸಹೋದರರು ಮೊದಲ ಬಾರಿಗೆ ವಿಮಾನ ಕಂಡುಹಿಡಿದ ಕುರಿತು ತಿಳಿಸಿದರಲ್ಲದೆ, ಮೊದಲ ಹಾಗೂ ಎರಡನೇ ಮಹಾಯುದ್ಧದ ನಂತರ ವೈಮಾನಿಕ ಕ್ಷೇತ್ರದ ಚಿತ್ರಣ ಬದಲಾಯಿತು ಎಂದು ಹೇಳಿದರು.


ರಣಾ ವಿಭಾಗದ ಅಗತ್ಯತೆಗಳನ್ನು ಪೂರೈಸಲು ತಂತ್ರಾನ ಎಂಬುದು ವೇಗ ನೀಡಿದ್ದು, ಇದೊಂದು ಹೊಸ ಬೆಳವಣಿಗೆಯಾಗಿದೆ. ಎಚ್​.ಎ.ಎಲ್​. ಸಂಸ್ಥೆಯು ಭವಿಷ್ಯದ ತಾಂತ್ರಿಕ ತಂತ್ರರನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕರ್ನಾಟಕದಲ್ಲಿ ಸೆಮಿ ಕಂಡಕ್ಟರ್​ಗಳನ್ನು ಉತ್ಪಾದಿಸಲು ಟವರ್​ ಗ್ರೂಪ್​ ಆ್​ ಕಂಪನಿ ಮತ್ತು ರೆಸಿಲಿಯನ್​ ಕಂಪನಿಯೊಂದಿಗೆ ಸಹಿ ಮಾಡಲಾಗಿದ್ದು, ದೇಶದಲ್ಲೆ ಸೆಮಿ ಕಂಡಕ್ಟರ್​ಗಳನ್ನು ಉತ್ಪಾದಿಸಲು ಸಹಿ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ ಹಾಗೂ ಈ ನಿರ್ಧಾರದ ಹಿಂದಿರುವ ಶಕ್ತಿಯೇ ಎಚ್​ಎಎಲ್​ ಮತ್ತು ಬಿಇಎಲ್​ ಎಂದು ತಿಳಿಸಿದರು.


ರಾಜ್ಯವು ನಿರಂತರವಾಗಿ ತಾಂತ್ರಿಕವಾಗಿ ಬೆಳೆಯುತ್ತಿರುವ ರಾಜ್ಯವಾಗಿದ್ದು, ಇಲ್ಲಿ 400 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿವೆ. ಬೆಂಗಳೂರಿನ ಹವಾಮಾನ ಮತ್ತು ಇಲ್ಲಿನ ಜನರ ಕೌಶಲಗಳನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಬೆಂಗಳೂರು ದೇಶದಲ್ಲೆ ಹೆಚ್ಚು ಅಭಿವೃದ್ಧಿ ಹೊಂದಿರುವ ನಗರವಾಗಲಿದೆ. ಆರ್ಥಿಕತೆ ಎಂಬುದು ಕೇವಲ ಹಣವಲ್ಲ. ಜನರ ಚಟುವಟಿಕೆಗಳನ್ನು ಸೂಚಿಸುತ್ತದೆ ಎಂದು ಹೇಳಿದರು.


ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಭಟ್ಟರಮಾರೇನಹಳ್ಳಿ ಕೆಐಎಡಿಬಿ ಪ್ರದೇಶದಲ್ಲಿ ಸಫ್ರಾನ್​ ಗ್ರೂಪ್​ ಹಾಗೂ ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​ನಿಂದ ಶುಕ್ರವಾರ ಆಯೋಜಿಸಿದ್ದ ಸಫ್ರಾನ್​ ಹಾಲ್​ ಏರ್​ ಕ್ರಾಫ್ಟ್​ ಇಂಜಿನ್​ ಸೌಲಭ್ಯಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಸಚಿವರಾದ ಮುರುಗೇಶ್​ ಆರ್​.ನಿರಾಣಿ, ಶಂಕರ್​ ಮುನೇನಕೊಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಹಿಂದೂಸ್ಥಾನ್​ ಏರೋನಾಟಿಕ್ಸ್​ ಲಿಮಿಟೆಡ್​ನ ಸಿಇಒ ಮಾಧವನ್​ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net