

ಉಡುಪಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಉಡುಪಿ ನಗರಸಭೆಯೂ ಸಣ್ಣದೊಂದು "ದರದ ಬರೆ' ನೀಡಿದೆ. ಕುಡಿಯುವ ನೀರಿನ ಬಳಕೆಯ ಶುಲ್ಕ ಪರಿಷ್ಕರಿಸಿ, ದರ ಏರಿಕೆ ಮಾಡುವ ಮೂಲಕ ಜನರಿಗೆ ಇನ್ನೊಂದು "ಹೊರೆ ಗಂಟು' ನೀಡಿದೆ.
ನವೆಂಬರ್ 1ರಿಂದಲೇ ಅನ್ವಯವಾಗುವಂತೆ ಕುಡಿಯುವ ನೀರಿನ ಬಳಕೆ ಶುಲ್ಕ ಏರಿಕೆಯಾಗಲಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಗೃಹಬಳಕೆ: ಗೃಹಬಳಕೆಗೆ 8 ಸಾವಿರ ಲೀ. ವರೆಗೆ 11 ರೂ., 8 ಸಾವಿರ ಲೀಟರ್ ಮೇಲ್ಪಟ್ಟು 15 ರೂ., 15 ಸಾವಿರ ಲೀ. ಮೇಲ್ಪಟ್ಟು 20 ರೂ. ಹಾಗೂ 20 ಸಾವಿರ ಲೀ.ಗಿಂತ ಅಧಿಕ ಬಳಕೆಯಾದಲ್ಲಿ 30 ರೂ. ವಿಧಿಸಲಾಗಿದೆ.
ಗೃಹೇತರ ಬಳಕೆ: 8 ಸಾವಿರ ಲೀಟರ್ ವರೆಗೆ 25ರೂ., 8 ಸಾವಿರ ಲೀ., ಮೇಲ್ಪಟ್ಟು 35 ರೂ., 15 ಸಾವಿರ ಲೀ. ಮೇಲ್ಪಟ್ಟು 50 ರೂ., ವಿಧಿಸಲಾಗಿದೆ.
ವಾಣಿಜ್ಯ, ಕೈಗಾರಿಕೆ: 8 ಸಾವಿರ ಲೀ. ವರೆಗೆ 50 ರೂ., 8 ಸಾವಿರ ಲೀ. ಮೇಲ್ಪಟ್ಟು 60 ರೂ. ಹಾಗೂ 15 ಸಾವಿರ ಲೀ. ಮೇಲ್ಪಟ್ಟು 70 ರೂ. ವಿಧಿಸಲಾಗಿದೆ. ಪ್ರತಿ ಸಂಪರ್ಕಕ್ಕೆ ಗೃಹ ಬಳಕೆಗೆ 88 ರೂ., ಗೃಹೇತರ ಸಂಪರ್ಕಕ್ಕೆ 200 ರೂ. ಹಾಗೂ ವಾಣಿಜ್ಯ/ ಕೈಗಾರಿಕೆಗಳ ಸಂಪರ್ಕಕ್ಕೆ 400 ರೂ. ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.