ನ.1ಕ್ಕೆ ಸರಳೇಬೆಟ್ಟು ವಸತಿ ಸಮುಚ್ಛಯ ಹಸ್ತಾಂತರಿಸಲು ಸೂಚನೆ

udp-6-cmc
Published on

ಉಡುಪಿ: ನಗರಸಭೆಯಿಂದ ಪಾವತಿಸಬೇಕಿದ್ದ ಹಣವನ್ನು ಈಗಾಗಲೇ ನೀಡಲಾಗಿದ್ದು, ನ.1ಕ್ಕೆ ಸರಳೇಬೆಟ್ಟು ವಸತಿ ಸಮುಚ್ಛಯದ ಮನೆಗಳನ್ನು ಲಾನುಭವಿಗಳಿಗೆ ಹಸ್ತಾಂತರಿಸಬೇಕು ಎಂದು ಶಾಸಕ ಯಶ್ಪಾಲ್​ ಸುವರ್ಣ ಸ್ಲಂ ಬೋರ್ಡ್​ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಸಭೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಒಪ್ಪಂದ ಪ್ರಕಾರ 2022ರಲ್ಲೇ ಮನೆಗಳನ್ನು ಹಸ್ತಾಂತರ ಮಾಡಬೇಕಿತ್ತು. ಅದರೆ ಕಾಮಗಾರಿ ವಿಳಂಬದಿಂದ ಲಾನುಭವಿಗಳು ಮನೆಗಳಿಗೆ ಬಾಡಿಗೆ ಕೊಡುವ ಜೊತೆಗೆ ಬ್ಯಾಂಕ್​ ಸಾಲ ಪಾವತಿಯನ್ನೂ ಮಾಡುವ ಅನಿವಾರ್ಯತೆ ಎದುರಾಗಿದ್ದು, ಸಾಲ ಪಾವತಿ ಶುರು ಮಾಡದ ಖಾತೆಗಳು ಎನ್​ಪಿಎ ಆಗುತ್ತಿವೆ. ಮನೆ ಸಂಪೂರ್ಣವಾಗದೆ ಸಾಲದ ಕೊನೆಯ ಕಂತು ಬ್ಯಾಂಕ್​ನವರು ಬಿಡುಗಡೆ ಮಾಡುವುದಿಲ್ಲ. ಈಗಾಗಲೇ ಬ್ಯಾಂಕ್ನವರೊಂದಿಗೆ ಮಾತನಾಡಿದ ಸಾಲ ಕಂತು ಮರುಪಾವತಿಯನ್ನು 6 ತಿಂಗಳು ವಿಸ್ತರಿಸಿದ್ದೇವೆ. ಅದಕ್ಕೂ ಮುನ್ನ ಮನೆ ಬಿಟ್ಟುಕೊಡದಿದ್ದರೆ ಬ್ಯಾಂಕ್ನವರೇ ಮನೆ ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಎಂದು ಎಚ್ಚರಿಸಿದರು.

ಸ್ಲಂ ಬೋರ್ಡ್​ ಬೇಜವಾಬ್ದಾರಿಯಿಂದ ನಗರಸಭೆಗೆ ಕೆಟ್ಟ ಹೆಸರು ಬರುವಂತಾಗಿದೆ. ಸಂಪರ್ಕ ರಸ್ತೆ ನಿರ್ಮಾಣಕ್ಕೆ ಮೀಸಲಿಟ್ಟ ಅನುದಾನವನ್ನು ಬೇರೆ ಕಾಮಗಾರಿಗೆ ಉಪಯೋಗಿಸಲಾಗಿದೆ. ಕೂಡಲೇ ಜನರಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ರಸ್ತೆ ಮತ್ತು ಒಳಚರಂಡಿ ಕಾಮಗಾರಿಯನ್ನು ನಡೆಸಬೇಕು ಎಂದು ಸೂಚಿಸಿದರು.

ಡಿಸೆಂಬರ್​ನಲ್ಲಿ ಡ್ರಜ್ಜಿಂಗ್​ ಮಾಡಿ
ಈ ಬಾರಿ ಮಳೆ ಣಿಸಿರುವುದರಿಂದ ನಗರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಡಿಸೆಂಬರ್​ನಲ್ಲಿ ಬಜೆ ಡ್ಯಾಂ ಸಹಿತ 5 ಕಡೆಗಳಲ್ಲಿ ಹೂಳೆತ್ತಲು ಪ್ರತ್ಯೇಕ ಟೆಂಡರ್​ ಕರೆಯಬೇಕು. ಜನವರಿಯಿಂದಲೇ ನೀರಿನ ಶೇಖರಣೆಗೆ ಕ್ರಮಕೈಗೊಳ್ಳಬೇಕು. ವಾರಾಹಿ ಕಾಮಗಾರಿ ಶೇ.40ರಷ್ಟು ಮಾತ್ರ ಪೂರ್ಣಗೊಂಡಿದ್ದು, ಯೋಜನೆ ಸಂಪೂರ್ಣ ವಿಲವಾಗಿದೆ. ಕಾಮಗಾರಿ ಇದೇ ರೀತಿ ಮುಂದುವರಿದರೆ ಉಡುಪಿಗೆ ನೀರು ಬರಲು 2 ವರ್ಷ ಬೇಕಾಗಬಹುದು. ಹೀಗಾಗಿ ಯೋಜನೆ ಪ್ರಗತಿ ಬಗ್ಗೆ ಇಂಜಿನಿಯರ್​ ಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಶಾಸಕ ಯಶ್ಪಾಲ್​ ಸುವರ್ಣ ತಿಳಿಸಿದರು.

ಪೌರಾಯುಕ್ತರು-ಸದಸ್ಯರ ಮಾತಿನ ಚಕಮಕಿ
ಶಾಸಕರ ಅಧ್ಯಕ್ಷತೆಯಲ್ಲಿ ಒಪ್ಪಿಗೆ ಪಡೆದ ಕಾರ್ಯಯೋಜನೆಯನ್ನು ಬದಲಾಯಿಸಿ, ಆನುದಾನ ಹಂಚಿಕೆ ವಿಚಾರದಲ್ಲಿ ತಾರತಮ್ಯ ಮಾಡಲಾಗಿದೆ. ಹಿಂದೂ ಸಮಾಜೋತ್ಸವ ಬ್ಯಾನರ್​ಗಳನ್ನು ಏಕಾಏಕಿ ತೆರವುಗೊಳಿಸಲಾಗಿದೆ ಎಂದು ಸದಸ್ಯ ಗಿರೀಶ್​ ಅಂಚನ್​ ಅರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯಕ್ತ ರಾಯಪ್ಪ, ಕಾರ್ಯಯೋಜನೆ ಬದಲಾಯಿಸಿಲ್ಲ. ಹೆಚ್ಚುವರಿ ಅನುದಾನ ರದ್ದು ಮಾಡಲಾಗಿದೆ. ಪೊಲೀಸರ ಸೂಚನೆ ಮೇರೆಗೆ ಅನಧಿಕೃತ ಬ್ಯಾನರ್​ ತೆರವು ಮಾಡಿದ್ದೇವೆ. ನಂತರ ಅರ್ಜಿ ಸಲ್ಲಿಸಿದ 29 ಬ್ಯಾನರ್ಗಳಿಗೆ ಅನುಮತಿ ನೀಡಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್​ ತೆರವು ಮಾಡಿಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪೌರಾಯುಕ್ತರು ಹಾಗೂ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮಧ್ಯೆ ಪ್ರವೇಶಿಸಿದ ಶಾಸಕರು, ಸದಸ್ಯರ ಗಮನಕ್ಕೆ ತಂದು ಯಾವುದೇ ರ್ನಿಣಯ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸಿದರು. ಮಾಜಿ ಅಧ್ಯೆ ಸುಮಿತ್ರಾನಾಯಕ್​, ಸಹಾಯಕ ಅಭಿಯಂತರ ಯಶ್ವಂತ್​ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net