ನಗರಸಭೆಯಲ್ಲಿ 5.17 ಕೋಟಿ ರೂ. ಮಿಗತೆ ಬಜೆಟ್​ ಮಂಡನೆ

udp-15-cmc
Published on

ಉಡುಪಿ: ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ 2025&26ನೇ ಸಾಲಿನ 5.17 ಕೋಟಿ ರೂ. ಮಿಗತೆ ಬಜೆಟ್​ ಮಂಡಿಸಿದರು. ಆರಂಭಿಕ ಮೊತ್ತ 107.57 ಕೋಟಿ ರೂ. ಹಾಗೂ 143 ಕೋಟಿ ರೂ. ಸ್ವಿಕೃತಿ ಸೇರಿ ಒಟ್ಟು 250.63 ಕೋಟಿ ರೂ. ಆದಾಯ ಅಂದಾಜಿಸಲಾಗಿದ್ದು, 245.46 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

ಆದಾಯ ಮೂಲ

15ನೇ ಕೇಂದ್ರ ಹಣಕಾಸು ಆಯೋಗದಿಂದ 2.86 ಕೋಟಿ ರೂ., 16ನೇ ಹಣಕಾಸು ಆಯೋಗದಿಂದ ಅನುದಾನ 6.33 ಕೋಟಿ ರೂ., ರಾಜ್ಯ ಹಣಕಾಸು ಆಯೋಗದಿಂದ 1.80 ಕೋಟಿ ರೂ., ಸಿಬ್ಬಂದಿ ವೇತನ ಅನುದಾನ 7.93 ಕೋಟಿ ರೂ., ವಿದ್ಯುತ್​ ಬಿಲ್ಲು ಅನುದಾನ 12.32 ಕೋಟಿ ರೂ., ಎಸ್​ಎಫ್​ಸಿ ವಿಶೇಷ ಅನುದಾನ 3 ಕೋಟಿ ರೂ., ಸ್ವಚ್ಛ ಭಾರತ ಮಿಷನ್​ ಯೋಜನೆಯಲ್ಲಿ 3.42 ಕೋಟಿ ರೂ., ಗೃಹಭಾಗ್ಯ ಯೋಜನೆಯಲ್ಲಿ 50 ಲಕ್ಷ ರೂ., ತ್ಯಾಜ್ಯ ನಿರ್ವಹಣೆ ಅನುದಾನ 2.56 ಕೋಟಿ ರೂ., ಶಾಸಕ, ಸಂಸದರ ಅನುದಾನ 40 ಲಕ್ಷ ರೂ., ವೆಂಡರ್​ ಝೊನ್​ ನಿರ್ಮಾಣ ಅನುದಾನ 1 ಕೋಟಿ ರೂ., ಆಸ್ತಿ ತೆರಿಗೆಯಿಂದ 25.20 ಕೋಟಿ ರೂ., ಉದ್ದಿಮೆ ಪರವಾನಿಗೆಯಿಂದ 1.50 ಕೋಟಿ ರೂ., ಜಾಹಿರಾತು ಶುಲ್ಕ 22 ಲಕ್ಷ ರೂ., ಕಟ್ಟಡ ಪರವಾನಿಗೆ 50 ಲಕ್ಷ ರೂ., ನೀರು ಸರಬರಾಜು ಶುಲ್ಕ 19 ಕೋಟಿ ರೂ., ನಗರಸಭೆ ವಾಣಿಜ್ಯ ಸಂರ್ಕಿಣ ಬಾಡಿಗೆ ಶುಲ್ಕ 2 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.

ವೆಚ್ಚಗಳ ಅಂದಾಜು ಪಟ್ಟಿ

ಕಚೇರಿ ಆಡಳಿತಾತ್ಮಕ ವೆಚ್ಚಗಳಿಗೆ ರೂ. 3.29 ಕೋಟಿ ರೂ., ಲೋಕೋಪಯೋಗಿ ಕಾಮಗಾರಿಗ-ಳು, ಮುಖ್ಯ ರಸ್ತೆಗಳ ಡಾಮರೀಕರಣ, ಕಾಂಕ್ರೀಟಿಕರಣ ಮತ್ತು ಹೊಸ ರಸ್ತೆಗಳ ನಿರ್ಮಾಣ ಕಾಮಗಾರಿಗಾಗಿ ರೂ. 30.65 ಕೋಟಿ ರೂ. ನಿಗದಿಪಡಿಸಲಾಗಿದೆ. ದಾರಿ ದೀಪಗಳ ದುರಸ್ತಿ ಹಾಗೂ ನಿರ್ವಹಣೆಗಾಗಿ 1. 85 ಕೋಟಿ ರೂ., ಕುಡಿಯುವ ನೀರು ಸರಬರಾಜು ಪೈಪುಗಳ ದುರಸ್ತಿ ಹಾಗೂ ನಿರ್ವಹಣೆಗಾಗಿ 12.53 ಕೋಟಿ ರೂ., ಹೊಸ ಪೈಪ್​ಲೈನ್​ ಹಾಗೂ ನೀರು ವಿತರಣಾ ವ್ಯವಸ್ಥೆಗಾಗಿ 4.98 ಕೋಟಿ ರೂ. ಮೀಸಲಿಡಲಾಗಿದೆ.

ನತ್ಯಾಜ್ಯ ನಿರ್ವಹಣೆಗೆ 26 ಕೋಟಿ ರೂ.

ನಗರಸಭಾ ವ್ಯಾಪ್ತಿಯ ಬೀದಿ ಗುಡಿಸುವ ಮತ್ತು ತ್ಯಾಜ್ಯ ಸಾಗಾಟ, ವಾಹನ ಖರೀದಿ, ಮಿಷನರಿಗಳ ಖರೀದಿ, ರೂ. 26.07 ಕೋಟಿ ರೂ., ಮೂಲ ಸೌಕರ್ಯಗಳ ವ್ಯವಸ್ಥೆಗಾಗಿ 14.08 ಕೋಟಿ ರೂ. ಮೀಸಲಿರಿಸಲಾಗಿದೆ. ನಗರಸಭಾ ವ್ಯಾಪ್ತಿಯ ಒಳಚರಂಡಿ ಮತ್ತು ಎಸ್​.ಟಿ.ಪಿಗಳ ನಿರ್ವಹಣೆಗಾಗಿ 4.54 ಕೋಟಿ ರೂ., ಒಳಚರಂಡಿ ಜಾಲ ಅಭಿವೃದ್ಧಿಗೆ ಮತ್ತು ಕೊಳಚೆ ನೀರು ಶುದ್ದೀಕರಣ ಟಕದ ವೆಚ್ಚಗಳಿಗೆ ರೂ. 5.35 ಕೋಟಿ ಕಾದಿರಿಸಲಾಗಿದೆ. ಉದ್ಯಾನವನಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ರೂ. 1 ಕೋಟಿ, ಹೊಸ ಉದ್ಯಾನವನಗಳಿಗಾಗಿ ರೂ. 1.50 ಕೋಟಿ, ಸ್ಮಶಾನಗಳ ಅಭಿವೃದ್ಧಿಗಾಗಿ 25 -ಲ-ಕ್ಷ ರೂ. ನಿಗದಿಪಡಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ ನಗರಸಭಾ ನಿಧಿಯಿಂದ 1.43 ಕೋಟಿ ರೂ., ಹಾಗೂ ಎಸ್​.ಎಫ್​.ಸಿ ಮುಕ್ತ ನಿಧಿಯಿಂದ ರೂ. 64 ಲ ರೂ. ಕಾದಿರಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಬಡವರ ಕಲ್ಯಾಣಕ್ಕಾಗಿ ನಗರಸಭಾ ನಿಧಿಯಿಂದ ರೂ. 43.20 ಲ ಹಾಗೂ ಎಸ್​.ಎಫ್​.ಸಿ ಮುಕ್ತ ನಿಧಿಯಿಂದ ರೂ. 6.81 ಲ , ದೈಹಿಕ ಹಾಗೂ ಮಾನಸಿಕ ನ್ಯೂನ್ಯತೆಯಿಂದ ಬಳಲುತ್ತಿರುವವರ ಸ್ವಾವಲಂಬನೆ ಮತ್ತು ಪೋಷಣೆಗಾಗಿ ನಗರಸಭಾ ನಿಧಿಯಿಂದ ರೂ. 29.79 ಲ ಹಾಗೂ ಎಸ್​.ಎಫ್​.ಸಿ ಮುಕ್ತ ನಿಧಿಯಿಂದ 4.70 ಲ ರೂ. ಕಾದಿರಿಸಲಾಗಿದೆ. ಕ್ರೀಡೆಗಳನ್ನು ಉತ್ತೇಜಿಸುವ ಸಲುವಾಗಿ ಕ್ರೀಡಾ ಇಲಾಖೆಗೆ ರೂ. 6.01 ಲ ರೂ., ಮಳೆನೀರು ಹರಿಯುವ ತೋಡುಗಳು, ತಡೆಗೋಡೆ, ಸಣ್ಣ ಸೇತುವೆಗಳ (ಕಾಲು ಸಂಕ) ನಿರ್ಮಾಣ ಹಾಗೂ ದುರಸ್ಥಿಗಳಿಗಾಗಿ 2.58 ಕೋಟಿ ರೂ. ನಿಗದಿಮಾಡಲಾಗಿದೆ.

ಕೆರೆಗಳ ಅಭಿವೃದ್ಧಿ

80 ಲಕ್ಷ ರೂ. ವೆಚ್ಚದಲ್ಲಿ ಕೊಡವೂರು ಸಿರಿಕುಮಾರ ಕೆರೆ, 30 ಲಕ್ಷ ರೂ. ವೆಚ್ಚದಲ್ಲಿ ಕಲ್ಮಾಡಿ ಗರಡಿ ಕೆರೆ, 45 ಲಕ್ಷ ರೂ. ವೆಚ್ಚದಲ್ಲಿ ಕಿನ್ನಿಮೂಲ್ಕಿ ಬ್ರಹ್ಮಬೃದರ್ಕಳ ಕೆರೆ, 63 ಲಕ್ಷ ರೂ. ವೆಚ್ಚದಲ್ಲಿ ಪರ್ಕಳ ಸರಸ್ವತಿನಗರ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಸಭೆಯಲ್ಲಿ ಶಾಸಕ ಯಶ್ಪಾಲ್​ ಸುವರ್ಣ, ಉಪಾಧ್ಯೆ ರಜನಿ ಹೆಬ್ಬಾರ್​, ಪೌರಾಯುಕ್ತ ಡಾ. ಉದಯ್​ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net