ಸಿದ್ದಾಪುರ ಕಾಳಜಿ ಕೇಂದ್ರಕ್ಕೆ ಬಾರದ ಸಿಎಂ

Oplus_0
ಪಿ.ಆರ್.ಭರತ್
Published on

ಸಿದ್ದಾಪುರ: ಕಳೆದ 50 ವರ್ಷಗಳಿಂದಲೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಸಂತ್ರಸ್ತರು ಪ್ರತಿ ವರ್ಷ ಮಳೆಗಾಲ ಸಂದರ್ಭದಲ್ಲಿ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಸಂತ್ರಸ್ತರಿಗೆ ರಾಜಕಾರಣಿಗಳ ಭರವಸೆಗಳ ಮಾತುಗಳು ಮಾತ್ರ ಪ್ರತಿ ವರ್ಷ ಕೇಳಿ ಬರುತ್ತಿದೆ ಹೊರತು ಶಾಶ್ವತ ಸೂರಿನ ವ್ಯವಸ್ಥೆಯಾಗುತ್ತಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

ಕರಡಿಗೋಡು ಗ್ರಾಮದಲ್ಲಿ ವಾಸವಾಗಿದ್ದ ಸಂತ್ರಸ್ತ ಕುಟುಂಬಗಳು ಸಿದ್ದಾಪುರದ ಸ್ವರ್ಣಮಾಲ ಕಲ್ಯಾಣ ಮಂಟಪದಲ್ಲಿರುವ ಕಾಳಜಿ ಕೇಂದ್ರದಲ್ಲಿ ವಾಸವಾಗಿದ್ದಾರೆ. ಇತ್ತೀಚೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಭರವಸೆ ಮಾತುಗಳನ್ನಾಡಿ ಹೋಗಿದ್ದಾರೆ.

ಆದರೆ ಶಾಶ್ವತ ಪರಿಹಾರವಾಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಳಜಿ ಕೇಂದ್ರಕ್ಕೆ ಬರುವುದಾಗಿ ತಿಳಿಸಿದ್ದರು. ಅವರು ಬಂದಿದ್ದರೆ ನಮ್ಮ ಸಮಸ್ಯೆಗಳು ಬಗೆಹರಿಯುತ್ತಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ನಿಗದಿಪಡಿಸಿದ್ದ ಕಾರ್ಯಕ್ರಮವನ್ನು ಮುಂದೂಡಿದ್ದಾರೆ. ಸಂತ್ರಸ್ತರ ಬೇಡಿಕೆಯನ್ನ ಶಾಶ್ವತವಾಗಿ ಈಡೇರಿಸಬೇಕೆಂದು ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷ ಪಿ.ಆರ್.ಭರತ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net