

ಉಡುಪಿ: ನಗರದ ಬನ್ನಂಜೆಯಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ನಿಲಯಕ್ಕೆ ಮಂಗಳವಾರ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಹಾಸ್ಟೆಲ್ ವಿದ್ಯಾರ್ಥಿಗಳ ಮಾತುಕತೆ ನಡೆಸಿದ ಸಿಎಂ, ಗೃಹಲಕ್ಷ್ಮಿ ಯೋಜನೆಯ ಬಗ್ಗೆ ವಿದ್ಯಾರ್ಥಿನಿಯರ ಜೊತೆ ಮಾತನಾಡಿದರು.
ಅಂತಿಮ ಡಿಗ್ರಿ ಪಾಸಾದ ಮೇಲೆ ಕೆಲಸ ಸಿಗುವ ತನಕ ಯುವನಿಧಿ ನೀಡುತ್ತೇವೆ, ನಿಮಗೇನಾದ್ರೂ ತೊಂದ್ರೆ ಇದ್ಯಾ, ತೊಂದರೆ ಇದ್ರೆ ಸರಿಪಡಿಸೋಕೆ ಕೇಳ್ತಾ ಇದ್ದೀನಿ..ಇವರು ಲಕ್ಷ್ಮಿ ಹೆಬ್ಬಾಳ್ಕರ್ ಉಸ್ತುವಾರಿ ಸಚಿವರು ನಿಮಗೆ ಏನಾದರೂ ತೊಂದರೆ ಇದ್ದರೆ ಹೇಳಬೇಕು. ನಿಮಗೆ ಹೆಲ್ತ್ ಚೆಕಪ್ ಇಲ್ಲ ಟೈಮ್ ಟು ಟೈಮ್ ಮಾಡಿಸ್ತಾ ಇದ್ದಾರಾ, ಡಾಕ್ಟರ್ಸ್ ಬರ್ತಾರಾ? ಊಟ ತಿಂಡಿಗೆ ಮೆನು ನೀವೇ ಕೊಡ್ತೀರಾ ಅವರೇ ಮಾಡುತ್ತಾರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವಿದ್ಯಾರ್ಥಿಗಳು, ಇಲ್ಲ ಸರ್ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿ.ಪಂ ಸಿಇಓ ಪ್ರಸನ್ನ ಸೇರಿದಂತೆ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.