ಮಂಗಳೂರಿನಲ್ಲಿ ನಡೆಯಬೇಕಿದ್ದ ಸಿಎಂ ವೀಡಿಯೋ ಕಾನ್ಫರೆನ್ಸ್‌ ರದ್ದು

IMG-20220427-WA0007
Published on

ಮಂಗಳೂರು: ಕೋವಿಡ್ ನಿರ್ವಹಣೆ ಕುರಿತಂತೆ ನಗರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿ ಜರುಗಬೇಕಿದ್ದ ಪ್ರಧಾನಮಂತ್ರಿಯವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿಡಿಯೋ ಕಾನ್ಪರೆನ್ಸ್ ರದ್ದಾಗಿದೆ. ಈ ವಿಡಿಯೋ ಸಂವಾದ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಲಿದೆ. ಮಂಗಳೂರಿನಲ್ಲಿ ಸಭೆ ನಡೆಯುವ ಕುರಿತಂತೆ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆ ನಡೆಸಿತ್ತು. ಬುಧವಾರ ಬೆಳಗ್ಗೆಯೂ ಅಧಿಕಾರಿಗಳು ಬೇಗ ಆಗಮಿಸಿ ವೀಡಿಯೋ ಕಾನ್ಫರೆನ್ಸ್‌ಗೆ ಸಂಬಂಧಿಸಿದ ಕೊನೇ ಹಂತದ ಸಿದ್ಧ ಮಾಡಿದ್ದರು. ಆದರೆ ಕೊನೇ ಕ್ಷಣದಲ್ಲಿ ಬೊಮ್ಮಾಯಿ ಅವರು ಬೆಂಗಳೂರಿನಿಂದಲೇ ಸಂವಾದದಲ್ಲಿ ಭಾಗವಹಿಸಲು ಇಚ್ಛಿಸಿದರು. ಮುಖ್ಯಮಂತ್ರಿಯವರು ಬುಧವಾರ ಜಿಲ್ಲೆಗೆ ಆಗಮಿಸಿ, ಮೂಡುಬಿದಿರೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಸದ್ಯ ಈ ಕಾಯಕ್ರಮಗಳೂ ಅನಿಶ್ಚಿತತೆಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net