

ರಾಯಚೂರು ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಬಾಕಿಯಿರುವ ಅನುದಾನ ಪಾವತಿ ಹಾಗೂ ಏಜೆನ್ಸಿಗಳ ಕಾಮಗಾರಿ ನಿರ್ವಹಿಸುವದನ್ನು ನಿಲ್ಲಿಸಲು ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುತ್ತದೆಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ನೀರಾವರಿ, ಲೋಕಪಯೋಗಿ, ಸಣ್ಣ ನೀರಾವರಿ ಸೇರಿದಂತೆ 32 ಸಾವಿರ ಕೋಟಿ ರೂ. ಹಣ ಗುತ್ತಿಗೆದಾರರ ಪಾವತಿ ಬಾಕಿಯಿದೆ. ಈಗಾಗಲೇ ಆಯಾ ಇಲಾಖೆ ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಇತ್ತೀಚಿಗೆ ಟೆಂಡರ್ ಕಾಮಗಾರಿಗಳನ್ನು ಕೆಆರ್‌ಡಿಐಎಲ್ ಸೇರಿ ಇತರೆ ಏಜೆನ್ಸಿಗಳಿಗೆ ನೀಡಿ ಗುತ್ತಿಗೆದಾರರಿಗೆ ಕೆಲಸ ವಿಲ್ಲದಂತಾಗಿದೆ.
4 ವಿನಾಯ್ತಿ ನೀಡಿ ಶೇ.40 ರಷ್ಟು ಹಣ ಮುಂಗಡ ನೀಡುವ ಏಜೆನ್ಸಿಗಳಲ್ಲಿ ಯಾವುದೇ ತಾಂತ್ರಿಕ ಸಿಬ್ಬಂದಿ, ಉಪಕರಣಗಳಿಲ್ಲದೇ ಕೆಲಸ ನೀಡಲಾಗುತ್ತಿದೆ. ಆದರೆ ಗುತ್ತಿಗೆದಾರರು ಅಧಿಕೃತ ಪರವಾನಿಗೆ ಪಡೆದು ಜಿಎಸ್‌ಟಿ ಸೇರಿ ಶುಲ್ಕ ವಾಪಿಸಿದರೂ ಕೆಲಸಗಳು ದೊರೆಯುತ್ತಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಪ್ರತಿವರ್ಷ 5 ಸಾವಿರ ಕೋಟಿ ರೂ. ಅನುದಾನ ನೀಡುತ್ತಿದ್ದರೂ ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ಸಿಗುತ್ತಿಲ್ಲ. ಸರ್ಕಾರ ಕೂಡಲೇ ಗುತ್ತಿಗೆದಾರರಿಗೆ ಕೆಲಸ ನೀಡಲು ಸೂಕ್ತ ನೀತಿ ರೂಪಿಸಿ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಜಗನ್ನಾಥ ಸೇಗಜಿ,ಜಿ.ಎಂ.ರವೀಂದ್ರ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ, ರವೀಂದ್ರರೆಡ್ಡಿ, ನಾಗಪ್ಪ ಗಿರಿಣಿ, ಸುರೇಶ ಹೊಸೂರು, ಶ್ರೀನಿವಾಸರಾವ್, ಭಾಸ್ಕರ ಇದ್ದರು.