

ರಾಯಚೂರು ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ದಲಿತರ ಸಮೂದಾಯಗಳು ಬೆಂಬಲಿಸಿಕೊಂಡು ಬಂದಿದ್ದರೂ, ಒಮ್ಮೆಯೂ ದಲಿತ ಸಿಎಂ ಮಾಡಲು ಮುಂದಾಗಲೇ ಇಲ್ಲವೆಂದು ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಎಚ್.ಕೆ.ಬಸವರಾಜ ಬೇಸರ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲುಇ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ದಲಿತ ಸಮುದಾಯದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ ಸೇರಿದಂತೆ ಅನೇಕರು ಅರ್ಹರ ಕಾಂಗ್ರೆಸ್‌ನಲ್ಲಿದ್ದರೆ. ಪಕ್ಷಕ್ಕೆ ನಿಷ್ಟರಾಗಿ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದರೂ ಒಂದು ಬಾರಿಯೂ ಅವಕಾಶ ನೀಡಲೇ ಇಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ, ಎರಡು ಅವಧಿ ಡಾ.ಪರಮೇಶ್ವರ ಕೆಲಸ ಮಾಡಿದ್ದಾರೆ.
ಕೆ.ಎಚ್.ಮುನಿಯಪ್ಪ, ಡಾ.ಎಚ್.ಸಿ.ಮಹಾದೇವಪ್ಪ ಸೇರಿ ಅನೇಕರು ಇದ್ದು ಮುಖ್ಯಮಂತ್ರಿಗಳನ್ನು ಮಾಡಬೇಕಿದೆ. ಸದ್ಯ ಸಮರ್ಥವಾಗಿದ್ದ ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿಯಾದರೂ ಅವಕಾಶ ನೀಡಬೇಕು ಎಂದರು.
ಪರಿಶಿಷ್ಟ ಜಾತಿಗಳ ಒಳ ಮೀಸಲು ಹಂಚಿಕೆಯಲ್ಲಿ ಅಲೆಮಾರಿಗಳಿಗೆ ಅನ್ಯಾಯವಾಗಿದ್ದು, ಪ್ರತ್ಯೇಕ ಮೀಸಲು ನೀಡಬೇಕು. ಅಲ್ಲದೇ ಹೊಲೆಯ ಸಂಬಂಧಿತ ಜಾತಿಗಳಾದ ಬ್ಯಾಗಾರ, ಹೊಲೆಯದಾಸರು ಸೇರಿದಂತೆ ನಾಲ್ಕು ಉಪ ಪಂಗಡಗಳು ಅಲೆಮಾರಿ ಗುಂಪುಗಳಿಗೆ ಸೇರ್ಪಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಲಗೈ ಸಂಬಂಧಿತ ಜಾತಿ ಪಟ್ಟಿಗೆ ಸೇರಿಸಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಮುಖಂಡರಾದ ಎಚ್.ಸಿ. ನಿರಂಜನಮೂರ್ತಿ, ಸಿ.ನಾರಾಯಣಸ್ವಾಮಿ, ಎಂ.ಸಿ.ಓಂಕಾರಪ್ಪ, ಡಿ.ವೆಂಕಟರಮಣಪ್ಪ, ಕೆ.ಇ.ಕುಮಾರ, ಶೇಖರ ರಾಂಪೂರು ಇದ್ದರು.