

ಸಿಂಧನೂರು: ನಗರದಲ್ಲಿ ಆಯೋಜಿಸಿರುವ ದಸರಾ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಉದ್ಘಾಟಿಸಲಿದ್ದಾರೆ.
ದಸರಾ ಉತ್ಸವ ಹಿನ್ನೆಲೆಯಲ್ಲಿ ನಗರದ ರಾಯಚೂರು, ಗಂಗಾವತಿ, ಕುಷ್ಟಗಿ ಮಾರ್ಗದಲ್ಲಿ ದೀಪಾಲಂಕಾರ ಮಾಡಲಾಗಿದೆ. ಅ. 5 ರಂದು ಸಾಂಸ್ಕೃತಿಕ ದಸರಾ, 6 ರಂದು ಸಾಹಿತ್ಯ-ನೌಕರರ ದಸರಾ, 7 ರಂದು ಮಹಿಳಾ ದಸರಾ, 8 ರಂದು ರೈತ ದಸರಾ, 9 ರಂದು ಕ್ರೀಡಾ-ಆರೋಗ್ಯ ದಸರಾ, 10 ರಂದು ಕಲಾ ದಸರಾ, 11ರಂದು ಯುವ ದಸರಾ ಹಾಗೂ 12 ರಂದು ಸಿಂಧನೂರು ಜಂಬೂ ಸವಾರಿ ಕಾರ್ಯಕ್ರಮ ನಡೆಯಲಿದೆ.
ಜವಳಗೇರಾ ಬಳಿ ರಸ್ತೆ ದುಸ್ಥಿಯಿಂದ ಬಹಳಷ್ಟು ಅಪಘಾತ ನಡೆದು, ಪ್ರಾಣ ಹಾನಿ ಸಂಭವಿಸಿದ್ದರೂ, ಎಚ್ಚೆತ್ತುಕೊಳ್ಳದ ಲೋಕೋಪಯೋಗಿ ಇಲಾಖೆ ಸಿಎಂ ಆಗಮನ ಹಿನ್ನೆಲೆಯಲ್ಲಿ ದುರಸ್ತಿಗೆ ಕ್ರಮ ವಹಿಸಿದೆ. ರಸ್ತೆ ವಿಭಜಕಗಳಿಗೆ ಬಣ್ಣ ಬಳಿಯಲಾಗಿದೆ. ಲೋಕೋಪಯೋಗಿ ಇಲಾಖೆಯ ಈ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.