

ರಾಯಚೂರು: ರಾಜ್ಯದಲ್ಲಿ ಭೀಕರ ಬರದಿಂದ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ರೈತರು ಸಂಕಷ್ಟದಲ್ಲಿದ್ದಾರೆ ಆದರೆ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದ್ದ ಸಮಾಜವಾದಿ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಜನರ ಹಣದಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ ಹೇಳಿದರು.
ಸ್ಥಳೀಯ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಬರದ ನಡುವೆ ಸಚಿವರಿಗಾಗಿ 34 ಐಷಾರಾಮಿ ಕಾರ್ ಖರೀದಿ ಮಾಡಲಾಗಿದೆ. 6.40 ಕೋಟಿ ರೂ. ಖರ್ಚು ಮಾಡಿ ತಮ್ಮ ನಿವಾಸ ನವೀಕರಣ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಚುನಾವಣೆಯಲ್ಲಿ ಸೋತ ಪಕ್ಷದ ನಾಯಕರಿಗೆ ಸ್ಥಾನಮಾನ ಕಲ್ಪಿಸಲು ಸಂವಿಧಾನ ಬಾಹಿರವಾಗಿ 85 ಸಂಪುಟ ದರ್ಜೆ ಸ್ಥಾನಮಾನಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಆರ್ಥಿಕ ಹೊರೆ ಉಂಟು ಮಾಡುತ್ತಿದ್ದಾರೆ. ಕುಡಿಯುವ ನೀರು ಒದಗಿಸುವ ಬದಲು ಗ್ಯಾರಂಟಿಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ.
ಸಂವಿಧಾನದ ಆಶಯ ರಕ್ಷಿಸುವುದಾಗಿ ಹೇಳುವ ಸರ್ಕಾರ ಮೈಬ್ರದರ್ ಪಾಲಸಿಯಿಂದ ದೇಶ ವಿರೋಗಳ ರಕ್ಷಣೆ ಮಾಡುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ 34 ಜನರಲ್ಲಿ ಮೂವರನ್ನು ಮಾತ್ರ ಬಂಸಲಾಗಿದೆ. ಎ್ಎಸ್‌ಎಲ್ ವರದಿಯಲ್ಲಿ ಸತ್ಯ ಬಹಿರಂಗವಾದರೂ ಕಾಂಗ್ರೆಸ್ ನಾಯಕರು ಒಪ್ಪಿಕೊಳ್ಳುತ್ತಿಲ್ಲ.
ಸರ್ಕಾರದ ನಡೆಯಿಂದ ವಿದ್ರೋಹಿ ಚಟುವಟಿಕೆಗಳು ಹೆಚ್ಚಳವಾಗುವಂತಾಗಿದೆ. ಪಿಎ್ಐ, ಕೆಎ್ಡಿ ಕಾರ್ಯಕರ್ತರ ಮೇಲೆ ಹಾಕಲಾಗಿದ್ದ ಕೇಸ್‌ಗಳನ್ನು ಹಿಂಪಡೆಯಲಾಗಿದ್ದು, ಶಾಸಕರ ಮನೆ ಮೇಲೆ ದಾಳಿಯಾದರೂ ಆರೋಪಿಗಳನ್ನು ರಕ್ಷಿಸಲಾಗಿದೆ.
ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿಲ್ಲ. ಕಾಂಗ್ರೆಸ್ ಅವಯ 2004ರಿಂದ 2014ರವರೆಗೆ ರಾಜ್ಯಕ್ಕೆ 81,785 ಕೋಟಿ ರೂ. ಬಂದಿದೆ. ಮೋದಿ ಪ್ರಧಾನಿಯಾದ 2014 ರಿಂದ 2024ರವರೆಗೆ ರಾಜ್ಯಕ್ಕೆ 2,85,452 ಕೋಟಿ ರೂ. ನೀಡಲಾಗಿದೆ. ಜತೆಗೆ ಅಭಿವೃದ್ಧಿ ಕಾರ್ಯಗಳಿಗೆ 2.78 ಲಕ್ಷ ಕೋಟಿ ನೀಡಲಾಗಿದೆ. ಆದರೆ ಸಿಎಂ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ.
ಇಂಡಿಯಾ ಮೈತ್ರಿಕೂಟದಲ್ಲಿರುವ ತಮಿಳುನಾಡಿನ ಎ.ರಾಜಾ ತಮಿಳುನಾಡು ಪ್ರತ್ಯೇಕ ರಾಷ್ಟ್ರ ಮಾಡುವುದಾಗಿ ಹೇಳುತ್ತಾರೆ. ಮತ್ತೊಬ್ಬರು ಭಾರತ್ ಮಾತಾಕೀ ಜೈ ಘೋಷಣೆ ಕೂಗುವುದಿಲ್ಲ ಎಂದು ಹೇಳುತ್ತಾರೆ. ಈ ಬಗ್ಗೆ ಕಾಂಗ್ರೆಸ್‌ನವರು ಮಾತನಾಡುವುದಿಲ್ಲ.
ರಾಜ್ಯಸಭಾ ಸದಸ್ಯರಾಗಿರುವ ನಾಸೀರ್ ಹುಸೇನ್‌ಗೆ ಪ್ರಮಾಣ ವಚನ ಬೋಸಬಾರದು ಎಂದು ಪಕ್ಷ ರಾಷ್ಟ್ರಪತಿಗಳಿಗೆ ಮನವಿ ಮಾಡುತ್ತಿದೆ. ತನಿಖೆ ನಡೆಸಿ ವರದಿ ಬರುವವರೆಗೂ ಪ್ರಮಾಣ ವಚನ ಬೋಧನೆ ಮಾಡಬಾರದು ಎನ್ನುವುದು ಪಕ್ಷದ ನಿಲುವಾಗಿದೆ ಎಂದು ರವಿಕುಮಾರ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ಪಾಪಾರೆಡ್ಡಿ, ಪಕ್ಷದ ಮುಖಂಡರಾದ ರಾಘವೇಂದರ ಉಟ್ಕೂರು, ಡಿ.ಶಂಕರರೆಡ್ಡಿ, ಶಿವಬಸಪ್ಪ ಮಾಲಿಪಾಟೀಲ್, ರವೀಂದ್ರ ಜಲ್ದಾರ್, ಗಿರೀಶ ಕನಕವೀಡು ಉಪಸ್ಥಿತರಿದ್ದರು.