

ಕೊಪ್ಪಳ : ಕಲಬುರಗಿಯಲ್ಲಿ ಸೆ.17 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳ ಜಿಲ್ಲೆಗೆ ಯಾವುದೇ ಬೃಹತ್ ಯೋಜನೆಗಳು ಮಂಜೂರು ಮಾಡದೆ ಅನ್ಯಾಯ ಮಾಡಿದ್ದಾರೆ ಎಂದು ಜನಪರ ಸಂಘಟನೆಗಳ ಒಕ್ಕೂಟ ಮತ್ತು ಕೊಳಚೆ ನಿಮೂರ್ಲನಾ ವೇದಿಕೆ ನೇತೃತ್ವದಲ್ಲಿ ಹಲವು ಸಂಘಟನೆಗಳು ಖಂಡಿಸಿವೆ.
ಕಲ್ಯಾಣ ಕರ್ನಾಟಕ ವೆಂದರೆ ಕಲಬುರಗಿ ಜಿಲ್ಲೆ ಮಾತ್ರ ಎಂಬಂತಾಗಿ ಆರು ಜಿಲ್ಲೆಗಳನ್ನು ಕಡೆಗಣಿಸಿ ಕಲಬುರಗಿ ಜಿಲ್ಲೆಗೆ ಅನೇಕ ಬೃಹತ್ ಯೋಜನೆಗಳು ಈ ಹಿಂದಿನ ಸರ್ಕಾರಗಳು ಜಾರಿಗೊಳಿಸುತ್ತಾ ಬಂದಿವೆ. ಅದನ್ನೇ ಈ ಸರ್ಕಾರವು ಮುಂದುವರಿಸಿದೆ. ಕಲ್ಯಾಣ ಕರ್ನಾಟಕದ ನಮ್ಮ ಕೊಪ್ಪಳ ಜಿಲ್ಲೆಗೆ ಕೇವಲ ಅಲ್ಪ ಪ್ರಮಾಣದ ಅನುದಾನಗಳ ಬಿಡುಗಡೆ ಮಾಡುವ ಮೂಲಕ ಸಮಾಧಾನಪಡಿಸುವುದಕ್ಕೆ ಸೀಮಿತಗೊಳಿಸಿದೆ.
ಕರ್ನಾಟಕದಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕದಲ್ಲೇ ಅತ್ಯಂತ ರ್ನಿಲಕ್ಷಿಸಲ್ಪಟ್ಟ ಕೊನೆಯ ಭಾಗದ ಜಿಲ್ಲೆಯಾದ ಕೊಪ್ಪಳಕ್ಕೆ ಅತ್ಯಾಧುನಿಕ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಸರ್ಕಾರಿ ಕಾನೂನು ಕಾಲೇಜು ಸೇರಿದಂತೆ ಅಭಿವೃದ್ದಿಗೆ ಪೂರಕವಾದ ಹಲವು ದೊಡ್ಡ ಯೋಜನೆಗಳನ್ನು ಮಂಜೂರು ಮಾಡಲಿ. ಕಲಬುರಗಿಯಲ್ಲಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕೊಪ್ಪಳ ಜಿಲ್ಲೆಗೆ ಸ್ಥಳಾಂತರಿಸುವ ಮೂಲಕ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕಾನೂನಾತ್ಮಕ ಶಿಕ್ಷಣದೊಂದಿಗೆ ಇತರೆ ಹಲವು ರಂಗಗಳಲ್ಲೂ ಇಲ್ಲಿನ ಜನರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಮಂಜೂರು ಮಾಡಬೇಕು.
ಆದರೆ ಮಂಗಳವಾರ ಕಲಬುರ್ಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ದೊಡ್ಡ ಯೋಜನೆಗಳನ್ನು ಮಂಜೂರು ಮಾಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಹಿಂದುಳಿದ ಕೊಪ್ಪಳ ಜಿಲ್ಲೆಗೆ ಸಂಪೂರ್ಣವಾಗಿ ರ್ನಿಲಕ್ಷಿಸಿ ಇಲ್ಲಿಯ ಜನರಿಗೆ ಅನ್ಯಾಯ ಮಾಡಿದ್ದಾರೆ.
ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್.ಕೊಳಚೆ ನಿಮೂರ್ಲನಾ ವೇದಿಕೆಯ ಜಿಲ್ಲಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ. ಪಾಸ್ಟರ್ಸ್ ಅಸೋಸಿಯೇಫಿನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್. ಮುಖಂಡರಾದ ಮೌಲಾ ಹುಸೇನ್ ಹಣಗಿ. ನೂರ್ ಸಾಬ್ ಹೊಸಮನಿ. ಜಾಫರ್ ಕುರಿ. ಗೌಸ್ ನೀಲಿ ಮುಂತಾದವರು ಖಂಡಿಸಿದ್ದಾರೆ.