

ಬೆಂಗಳೂರು: ರಾಜಧಾನಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ನಗರ ಪ್ರದಕ್ಷಿಣೆ ನಡೆಸಿದರು.
ಮಧ್ಯಾಹ್ನ12ಕ್ಕೆ ವಿಧಾನಸೌಧದಿಂದ ಬಿಎಂಟಿಸಿ ಹವಾನಿಯಂತ್ರಿತ ಬಸ್ನಲ್ಲಿ ಹೊರಟ ಸಿಎಂ, ರಾಜಭವನ ರಸ್ತೆ, ಚಾಲುಕ್ಯ ವೃತ್ತ, ಹೈಗ್ರೌಂಡ್ಸ್ ವೃತ್ತ ಮೂಲಕ ಬಳ್ಳಾರಿ ರಸ್ತೆ ಕಡೆಗೆ ಸಾಗಿ, ಹೆಬ್ಬಾಳದ ಬಳಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೊಂಡಿರುವ ಮೇಲ್ಸೇತುವೆ ಕಾಮಗಾರಿ ಪ್ರಗತಿ ಪರಿಶೀಲಿಸಿದರು. ಈ ವೇಳೆ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಆಯುಕ್ತ ಎನ್. ಜಯರಾಂ ಅವರಿಂದ ಮಾಹಿತಿ ಪಡೆದು ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಸೂಚಿಸಿದರು. ಬಳಿಕ, ಅಲ್ಲಿಂದ ಹೊರಟು ಹೆಬ್ಬಾಳದ ಹೊರವರ್ತುಲ ರಸ್ತೆಯ ಕರಿಯಣ್ಣಪಾಳ್ಯದ ಬಳಿ ಸರ್ವೀಸ್ ರಸ್ತೆ ಕಾಮಗಾರಿ ಪರಿಶೀಲಿಸಿದರು. ಈ ವೇಳೆ ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್. ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಡಾಂಬರೀಕರಣ ಹಾಕಿರುವ ಕುರಿತು ಮಾಹಿತಿ ಕೊಟ್ಟರು.
ವೀರಣ್ಣಪಾಳ್ಯ- ಹೆಣ್ಣೂರು ಮುಖ್ಯರಸ್ತೆ-ನಾಗವಾರ ಜಂಕ್ಷನ್ ಬಳಿ ವಾಹನದಟ್ಟಣೆ ನಿವಾರಣೆಗೆ ಬಿಎಂಆರ್ಸಿಎಲ್ ನಡೆಸುತ್ತಿರುವ ನಿರ್ಮಾಣ ಹಂತದ ಸರ್ವೀಸ್ ರಸ್ತೆಯ ಕಾಮಗಾರಿ ವೀಕ್ಷಣೆ ಮಾಡಿದರು. ಅಂತಿಮವಾಗಿ ಕೆ.ಆರ್.ಪುರ ರೈಲು ನಿಲ್ದಾಣ ಬಳಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯ ನೆ ವೀಸಿ ಬಿಎಂಆರ್ಸಿಎಲ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲಿಂದ ಮೆಟ್ರೋ ಮೂಲಕ ಹೊರಟ ಸಿಎಂ ವಿಧಾನಸೌಧಕ್ಕೆ ತಲುಪಿದರು. ಸಚಿವರಾದ ಕೆ.ಜೆ.ಜಾರ್ಚ್, ಭೈರತಿ ಸುರೇಶ್, ಶಾಸಕರಾದ ರಿಜ್ವಾನ್ ಆರ್ಷದ್, ಭೈರತಿ ಬಸವರಾಜು, ಎ.ಸಿ. ಶ್ರೀನಿವಾಸ್, ಸಿಎಂ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಬಿಎಂಆರ್ಸಿಎಲ್ ಎಂಡಿ ಮಹೇಶ್ವರ್ ರಾವ್, ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಸೇರಿ ಬಿಬಿಎಂಪಿ, ಬಿಡಿಎ ಅಧಿಕಾರಿಗಳು ಸಾಥ್ ನೀಡಿದರು.
45-50 ಕಾರುಗಳ ಪರೇಡ್:
ಬೆಂಗಳೂರು ನಗರ ಉಸ್ತುವಾರಿ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್ ಅನುಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ, ನಡೆಸಿದ್ದ ನಗರ ಪ್ರದಣೆ ಬರೀ ಒಂದೂಕಾಲು ಗಂಟೆಯಲ್ಲಿ ಮುಗಿಯಿತು. ಇಂದಿರಾನಗರ ಮುಖ್ಯರಸ್ತೆಯಲ್ಲಿ ಗುಂಡಿ ಮುಚ್ಚಿರುವುದು, ಗುರುದ್ವಾರ ಜಂಕ್ಷನ್& ಹಲಸೂರು ರಸ್ತೆಯಲ್ಲಿ ನಡೆಯುತ್ತಿರುವ ಡಾಂಬರೀಕರಣ ವೀಸಲಿದ್ದಾರೆ ಎಂಬ ಮಾಹಿತಿ ನೀಡಲಾಗಿತ್ತು. ಆದರೆ ಅಲ್ಲಿಗೆ ಭೇಟಿ ನೀಡದೆ ತರಾತುರಿಯಲ್ಲಿ ವಿಧಾನಸೌಧಕ್ಕೆ ಬಂದಿಳಿದರು. ಕೆ.ಆರ್. ಪುರದ ಮೆಟ್ರೋ ಕಾಮಗಾರಿ ಹೊರತುಪಡಿಸಿ ಉಳಿದ ಕಾಮಗಾರಿಯನ್ನು ಬರೀ ಒಂದೆರೆಡು ನಿಮಿಷ ವೀಸಿದರು. ಸಿಎಂ ಜತೆಯಲ್ಲಿ ಸಚಿವರು, ಸಚಿವರ ಆಪ್ತರು, ಶಾಸಕರು ಮತ್ತು ಶಾಸಕರ ಆಪ್ತರು ಹೀಗೆ ಸುಮಾರು 45-50 ಕಾರುಗಳ "ಪರೇಡ್' ನಡೆಯಿತು. ಅಂತಿಮವಾಗಿ ಸಿಎಂ ಗೃಹಕಚೇರಿ "ಕೃಷ್ಣಾ'ದಲ್ಲಿ ನಡೆಯಬೇಕಿದ್ದ ಸುದ್ದಿಗೋಷ್ಠಿಯನ್ನು ರದ್ದು ಮಾಡಲಾಯಿತು.
ಸಿಎಂ ಸಿಟಿ ರೌಂಡ್ಸ್ ವಿವರ:
* ಮಧ್ಯಾಹ್ನ 12ಕ್ಕೆ ವಿಧಾನಸೌಧದಿಂದ ನಗರ ಪ್ರದಕ್ಷಿಣೆ ಶುರು.
* 12.20ಕ್ಕೆ ಹೆಬ್ಬಾಳದ "ಎ' ಬ್ಲಾಕ್ನ ಶ್ರೀ ಪಿಲ್ಲೆಕಮ್ಮ ದೇವಸ್ಥಾನ ಬಳಿ ನಡೆಯುತ್ತಿರುವ ಮೇಲ್ಸುತುವೆ ಕಾಮಗಾರಿ ವೀಣೆ.
* 12.35ಕ್ಕೆ ಹೆಬ್ಬಾಳದ ಹೊರವರ್ತುಲ ರಸ್ತೆಯ ಕರಿಯಣ್ಣಪಾಳ್ಯದ ಬಳಿ ಸರ್ವೀಸ್ ರಸ್ತೆ
ಕಾಮಗಾರಿ ವೀಕ್ಷಣೆ
* 12.49ಕ್ಕೆ ವೀರಣ್ಣಪಾಳ್ಯ& ಹೆಣ್ಣೂರು ಮುಖ್ಯರಸ್ತೆ& ನಾಗವಾರ ಜಂಕ್ಷನ್ ಬಳಿ ವಾಹನದಟ್ಟಣೆ ತಡೆಗೆ ಸರ್ವೀಸ್ ರಸ್ತೆಯ ಕಾಮಗಾರಿ ಪ್ರಗತಿ ಪರಿಶೀಲನೆ.
* 1.10ಕ್ಕೆ ಕೆ.ಆರ್. ಪುರದ ರೈಲು ನಿಲ್ದಾಣ ಮುಂಭಾಗ ಬಿಎಂಆರ್ಸಿಎಲ್ ಮೆಟ್ರೋ ಕಾಮಗಾರಿ ನೆ ವೀಣೆ.
* 1.25ಕ್ಕೆ ಮೆಟ್ರೋ ರೈಲಿನಲ್ಲಿ ವಿಧಾನಸೌಧಕ್ಕೆ.
ವಾಹನದಟ್ಟಣೆ:
ಸಿಎಂ ಪ್ರದಕ್ಷಿಣೆ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಎರಡು ಬದಿಯ ರಸ್ತೆಗಳಲ್ಲಿ ವಾಹನದಟ್ಟಣೆ ಉಂಟಾಯಿತು.ಇದರಿಂದಾಗಿ ಕೆಲ ಕಾಲ ವಾಹನ ಸವಾರರು ಪರದಾಡಿದರು. ಕೆಲ ರಸ್ತೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಿದವು.