ಸಿಎಂ ಸಿದ್ದರಾಮಯ್ಯಗೆ ಬುದ್ಧಿಭ್ರಮಣೆ

CM Siddaramaiah lost his mind.
ಮುದ್ದೇಬಿಹಾಳ ತಹಸೀಲ್ದಾರ್​ ಕಚೇರಿ ಆವರಣದಲ್ಲಿ ಕುಂಟೋಜಿ ರೈತರು ನಡೆಸುತ್ತಿರುವ ಹೋರಾಟ ಸ್ಥಳಕ್ಕೆ ಆಗಮಿಸಿದ್ದ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯ ಎ.ಎಸ್​.ಪಾಟೀಲ ನಡಹಳ್ಳಿ ಮಾತನಾಡಿದರು. ಮುನ್ನಾಧಣಿ ನಾಡಗೌಡ, ಕೆ.ಆರ್​.ಬಿರಾದಾರ ಇನ್ನಿತರರು ಇದ್ದಾರೆ.
Published on

ಮುದ್ದೇಬಿಹಾಳ: ಮುಡಾ ಹಗರಣದಿಂದ ನಲುಗಿ ಹೋಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬುದ್ಧಿಭ್ರಮಣೆಯಾಗಿದೆ ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯ ಎ.ಎಸ್​.ಪಾಟೀಲ ನಡಹಳ್ಳಿ ಹೇಳಿದರು.

ತಹಸೀಲ್ದಾರ್​ ಕಚೇರಿ ಆವರಣದಲ್ಲಿ ಕುಂಟೋಜಿ, ಬಿದರಕುಂದಿ ರೈತರು ಪ್ರಾರಂಭಿಸಿರುವ ಧರಣಿ ಸತ್ಯಾಗ್ರಹಕ್ಕೆ ಶುಕ್ರವಾರ ಬೆಂಬಲ ಸೂಚಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಇತ್ತೀಚಿನ ದಿನಗಳಲ್ಲಿ ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ಆಶ್ಚರ್ಯ ಉಂಟು ಮಾಡುತ್ತಿವೆ ಎಂದರು.

ವಕ್ಫ್​ ಸಚಿವರ ಮುಖಾಂತರ ರೈತರ ವಿರುದ್ಧ ದ್ವೇಷದ ರಾಜಕಾರಣ ಪ್ರಾರಂಭಿಸಿದ್ದಾರೆ. ರಾಜ್ಯದಲ್ಲಿರುವುದು ರೈತ ವಿರೋಧಿ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್​ಡಿಎ ಸರ್ಕಾರ ವಕ್ಫ್​ ಕಾಯ್ದೆಗೆ ತಿದ್ದುಪಡಿ ತರಲಿದ್ದು ರೈತರು ಎದೆಗುಂದಬೇಕಿಲ್ಲ ಎಂದರು.

ಕಾಂಗ್ರೆಸ್​ಗೆ ವೋಟ್​ ಹಾಕಿ ಬಹಳ ದೊಡ್ಡ ತಪ್ಪು ಮಾಡಿರುವ ಮತದಾರರು ಅದರ ಲವನ್ನೀಗ ಅನುಭವಿಸುತ್ತಿದ್ದಾರೆ. ಕರ್ನಾಟಕದಲ್ಲಿ ರೈತರು ಯಾಕಪ್ಪಾ ಈ ಪಾಪದ ಸರ್ಕಾರ ತಂದಿದ್ದೇವೆ ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.

ರೈತರು ಎರಡು ದಿನದಿಂದ ಹೋರಾಟ ನಡೆಸುತ್ತಿದ್ದಾರೆ. ರೈತರ ಆಸ್ತಿ ಲೂಟಿ ಹೊಡೆಯಲು ಸಿದ್ಧರಾಗಿದ್ದೀರಾ ಅನ್ನೋ ಪ್ರಶ್ನೆಯನ್ನು ಶಾಸಕರಿಗೂ ಕೇಳ್ತೇವೆ. ಈಗಲಾದರೂ ತಹಸೀಲ್ದಾರ್​ಗೆ ಹೇಳಿ ರೈತರಿಗಾದ ಅನ್ಯಾಯ ಸರಿಪಡಿಸುವ ಕೆಲಸವನ್ನು ಈ ಭಾಗದ ಶಾಸಕರು ಮಾಡಬೇಕು. ಇಲ್ಲವಾದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.

ಮಾಜಿ ಸೆನಿಕ ಕುಂಟೋಜಿಯ ನಾಗಲಿಂಗಯ್ಯ ಮಠ ಮಾತನಾಡಿ, ಹೈಕೋರ್ಟ್​ನಿಂದ ಆದೇಶ ತಂದರೂ, ಜಿಲ್ಲಾಧಿಕಾರಿ ಪತ್ರದ ಮೂಲಕ ತಿಳಿಸಿದರೂ ಇಲ್ಲಿನ ತಹಸೀಲ್ದಾರ್​ ಕ್ರಮ ಜರುಗಿಸುತ್ತಿಲ್ಲ. 24 ರೈತರ 380 ಎಕರೆ ಜಮೀನಿನ ಪಹಣಿಗಳಲ್ಲಿ ವಕ್ಪ್​, ಕರ್ನಾಟಕ ಸರ್ಕಾರ ಎಂದು ದಾಖಲಾಗಿದೆ ಎಂದರು.

ಜಿಪಂ ಮಾಜಿ ಸದಸ್ಯ ಗಂಗಾಧರರಾವ್​ ನಾಡಗೌಡ (ಮುನ್ನಾಧಣಿ) ಮಾತನಾಡಿ, ಈ ಹೋರಾಟ ಬಹಳ ದಿನಗಳ ಹಿಂದೆಯೇ ಆಗಬೇಕಿತ್ತು. ರೈತರು ಈಗ ಎಚ್ಚರಾಗಿದ್ದಾರೆ ಎಂದರು.

ಸಂಗಣ್ಣ ಬಾಗೇವಾಡಿ, ಜಿಪಂ ಮಾಜಿ ಉಪಾಧ್ಯ ಕೆ.ಆರ್​.ಬಿರಾದಾರ, ತಾಪಂ ಮಾಜಿ ಅಧ್ಯ ಮುತ್ತಣ್ಣ ಹುಗ್ಗಿ, ಕುಂಟೋಜಿ ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯ ಗುರುಲಿಂಗಪ್ಪ ಸುಳ್ಳಳ್ಳಿ, ಸಿದ್ದು ಹೆಬ್ಬಾಳ, ಚಂದ್ರಶೇಖರ ಕೋಳೂರ, ಬಸಯ್ಯ ಮಠ, ಸಂಗಣ್ಣ ಕುಂಬಾರ, ಸೋಮಲಿಂಗಪ್ಪ ಗಸ್ತಿಗಾರ, ರಮೇಶ ಉಗರಗೋಳ, ಬಸವರಾಜ ಕೋಳೂರ, ಸದಾನಂದ ರಕ್ಕಸಗಿ, ಪಾಶ್ಯಾಜಾನಿ ಇನಾಮದಾರ, ಸಿದ್ರಾಮ ಹಡಪದ, ನಯೀಮಪಾಶಾ ಇನಾಮದಾರ, ಜ್ಯೋತಿ ಸೊಲ್ಲಾಪುರ, ಮಹಾದೇವಿ ಕೋಳೂರ, ಕುಂಟೋಜಿ, ಬಿದರಕುಂದಿ ಗ್ರಾಮದ ನೂರಾರು ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net