

ಜಮಖಂಡಿ: ಚುನಾವಣೆ ಸಂದರ್ಭ ಕೊಟ್ಟ ಭರವಸೆಯಂತೆ ರಾಜ್ಯದ ಜನತೆಗೆ ಪಂಚ ಗ್ಯಾರಂಟಿ ಯೋಜನೆ ನೀಡಿ ಮಹಿಳೆಯರ, ಯುವಕರ, ಬಡ ಕುಟುಂಬದ ಸದಸ್ಯರಿಗೆ ಶಕ್ತಿ ತುಂಬುವ ಕಾರ್ಯವನ್ನು ಸಿಎಂ ಸಿದ್ದರಾಮಯ್ಯ ಮಾಡುತಿದ್ದಾರೆ. ಈ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಲಾನುಭವಿಗಳು ಬಳಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಮಂಗಳವಾರ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕುಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1.17 ಲಕ್ಷ ಮನೆಯ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ಪ್ರತಿ ತಿಂಗಳು ಅವರ ಖಾತೆಗೆ ವರ್ಗಾವಣೆ ಆಗುತ್ತಿದೆ. ಶಕ್ತಿ ಯೋಜನೆಯಡಿ ಒಂದು ವರ್ಷದ ಅವಧಿಯಲ್ಲಿ 229 ಕೋಟಿ ಹೆಣ್ಣುಮಕ್ಕಳು ಉಚಿತ ಪ್ರಯಾಣ ಮಾಡಿದ್ದಾರೆ. ಅಂದಾಜು 5,500 ಕೋಟಿ ರೂ. ಹಣ ಸರ್ಕಾರ ವ್ಯಯಮಾಡಿದೆ. 200 ಯುನಿಟ್ ಉಚಿತ ವಿದ್ಯುತ್ ಗೃಹ ಜ್ಯೋತಿ ಯೋಜನೆಯಡಿ 51,419 ಕೋಟಿ ರೂ. ಮನೆಗಳಿಗೆ ನೀಡಲಾಗಿದೆ. ಜಮಖಂಡಿಯಲ್ಲಿ 2.8 ಲಕ್ಷ ಉಚಿತ ವಿದ್ಯುತ್ ಪಡೆದಿದ್ದಾರೆ ಎಂದರು.
ಯುವ ನಿಧಿ ಯೋಜನೆಯಡಿ ಒಂದು ವರ್ಷದಲ್ಲಿ. 1.20 ಸಾವಿರ ನಿರುದ್ಯೋಗ ಪದವಿ ಯುವಕರಿಗೆ 1500 ರಿಂದ 3000 ಪ್ರೋತ್ಸಾಹ ಧನ ನೀಡಲಾಗಿದೆ. ಸರ್ಕಾರ ಈ ಯೋಜನೆಗೆ 3.8 ಲಕ್ಷ ರೂ. ನೀಡಿದೆ ಎಂದರು.
ಜಮಖಂಡಿ ಕ್ಷೇತ್ರದಲ್ಲಿ ಶೇ. 96 ರಷ್ಟು ಲಾನುಭವಿಗಳು ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಶೇ. 4 ರಷ್ಟು ಜನ ಮಾತ್ರ ಉಳಿದಿದ್ದಾರೆ. ಕೆಲವೇ ದಿನಗಳಲ್ಲಿ ಶೇ. 100 ರಷ್ಟು ಈ ಯೋಜನೆ ಅನುಷ್ಠಾನಗೊಳಿಸುವಲ್ಲಿ ತಾಲೂಕು ಸಮಿತಿ ರಚಿಸಲಾಗಿದೆ ಎಂದರು.
ಕಾಂಗ್ರೆಸ್ ರೈತ ಮುಖಂಡಿ ಬಿ.ಎಸ್. ಸಿಂಧೂರ, ಭೂ ಸೇನಾ ನಿಗಮದ ಮಾಜಿ ಅಧ್ಯಕ್ಷ ಶ್ರೀಶೈಲ ದಳವಾಯಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವರ್ಧಮಾನ್ ನ್ಯಾಮಗೌಡ ಮಾತನಾಡಿದರು.
ತಾಲೂಕುಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕಲ್ಲಪ್ಪ ಗಿರಡ್ಡಿ, ಸದಸ್ಯರಾದ ಮಹಾವೀರಗೌಡ ಪಾಟೀಲ, ಅಣ್ಣಪ್ಪ ಶಿರಹಟ್ಟಿ ಚಿದಾನಂದ ಚೌರಿ, ಸಂಗಪ್ಪ ಅಂಕಲಗಿ, ರಾಮಣ್ಣ ಚಿನಗುಂಡಿ, ಅಧಿನಾಥ ಸಕಳೆ ಶಿವಕುಮಾರ ದಾನಕ್ಕನವರ, ಸಾದಿಕ ಬಂಟನೂರ, ಶಂಭು ಆಲಬಾಳ, ಬಸವರಾಜ ಹರಕಂಗಿ, ತುಕಾರಾಮ ಪವಾರ, ಶ್ರೀಮಂತ ಪಾರ್ಥನಳ್ಳಿ, ಸಿದ್ರಾಮ ನ್ಯಾಮಗೌಡ, ಮಹಾದೇವಿ ಬೆಬ್ಬಾಣಿ ಅವರನ್ನು ಸನ್ಮಾನಿಸಲಾಯಿತು.
ಜಮಖಂಡಿ ನಗರ ಸಾವಳಗಿ ಹೋಬಳಿ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹೇಶ ಕೋಳಿ, ವಹಾದೇವ ಪಾಟೀಲ, ಅರ್ಜುನ್ ದಳವಾಯಿ, ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ, ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಸದಸ್ಯರಾದ ಈಶ್ವರ ವಾಳೇನ್ನವರ, ಸಿದ್ದು ಮೀಸಿ, ದಾನೇಶ ಘಾಟಗೆ, ಅನೀಲ ಶಿಂಧೆ, ಕಿರಣ ಪಿಸಾಳ, ಎಚ್. ಎಚ್. ಪೈಲವಾನ್, ಮುಖಂಡರಾದ ಶಾಮರಾವ್ ಘಾಟಗೆ, ಈಶ್ವರ ಕರಬಸನವರ, ನಿಂಗಪ್ಪ ಕಡಪಟ್ಟಿ, ಅಭಯ ನಾಂದ್ರೇಕರ, ರಾಜು ಮೇಲಿನಕೇರಿ, ಬಸವರಾಜ ನ್ಯಾಮಗೌಡ, ರಫೀಕ್ ಬಾರಿಗಡ್ಡಿ ಇತರರಿದ್ದರು.