ಕಿತ್ತೂರು ಉತ್ಸವಕ್ಕೆ ಚಾಲನೆ ವೇಳೆ CM ಸಿದ್ದರಾಮಯ್ಯ ಬಟ್ಟೆಗೆ ತಾಕಿದ ಬೆಂಕಿ!

siddaramaiah
Published on

ಬೆಳಗಾವಿ:  ಕಿತ್ತೂರು ವಿಜಯ ಜ್ಯೋತಿ ಯಾತ್ರೆ ರಥದ ಮುಂದೆ ಸಿಎಂ ಸಿದ್ದರಾಮಯ್ಯ ( CM Siddaramaiah) ದೀಪ ಬೆಳಗಿಸುವಾಗ ಆಕಸ್ಮಿಕವಾಗಿ ಸಣ್ಣ ಕಿಡಿ ಹಾರಿ ಸಿಎಂ ದೋತಿಗೆ ತಗುಲಿತು. ತಕ್ಷಣ ಭದ್ರತಾ ಸಿಬ್ಬಂದಿ ಕಿಡಿಯನ್ನು ನಂದಿಸಿದ್ದಾರೆ.  ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಿದ್ದರಾಮಯ್ಯ ಬಟ್ಟೆಗೆ ತಾಕಿದ ಬೆಂಕಿ :

ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಕಿತ್ತೂರು ಉತ್ಸವ ಜ್ಯೋತಿಗೆ ಚಾಲನೆ ನೀಡುವಾಗ ಸಿಎಂ ( CM ) ಬಟ್ಟೆಗೆ ಸಣ್ಣ ಬೆಂಕಿಯ ಕಿಡಿ ತಾಗಿದೆ. ಉತ್ಸವದ ಜ್ಯೋತಿ ಬೆಳಗುವ ವೇಳೆ ಸಿಎಂ ಬಟ್ಟೆಗೆ ಆಕಸ್ಮಿಕವಾಗಿ ಸಣ್ಣ ಕಿಡಿ ತಾಗಿದೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ಎಚ್ಚೆತ್ತುಕೊಂಡು ಬೆಂಕಿಯನ್ನು ಆರಿಸಿದ್ದಾರೆ.

ಈ ವಿಡಿಯೋಗಳು ಕೂಡ ವೈರಲ್‌  ಆಗುತ್ತಿದ್ದಂತೆ  ಅವಗಢ ಸಣ್ಣದೇ ಆಗಿದ್ದರೂ, ಇದು ಅಪಶಕುನದ ಮುನ್ಸೂಚನೆ ಎಂದು ನೆಟ್ಟಿಗರು  ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಕಳೆದ ಸಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಕಾರಿನ ಮೇಲೆ ಕಪ್ಪು ಕಾಗೆ ಕುಳಿತುಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಕೊನೆಗೆ ಸಿದ್ದರಾಮಯ್ಯ ಈ ಕಾರ್‌ಅನ್ನೇ ಬದಲಾಯಿಸಿದ್ದರು. ಈಗ ಸಿದ್ದರಾಮಯ್ಯ ಅವರಿಗೆ ಮುಡಾ ಸಂಕಷ್ಟ ಎದುರಾಗಿದೆ. ಇದರ ನಡುವೆ ಅವರಿಗೆ ಕೆಲವು ಅಪಶಕುನದ ಮುನ್ಸೂಚನೆ ಸಿಗ್ತಾ ಇದ್ಯಾ ಎನ್ನುವ ಅನುಮಾನ ಕಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net