ಮೋದಿ ನುಡಿದಂತೆ ನಡೆದಿಲ್ಲ: ಸಿಎಂ ಸಿದ್ದರಾಮಯ್ಯ ಟೀಕೆ

cm-siddaramaaya-argu-pm-modhi-guarantee-shceem-koppal
ಸಿಎಂ‌‌ ಸಿದ್ದರಾಮಯ್ಯ ಸೋಮವಾರ ಕೊಪ್ಪಳದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.
Published on

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ನುಡಿದಂತೆ ಎಂದೂ ನಡೆದುಕೊಂಡಿಲ್ಲ. ಇಷ್ಟು ದಿನ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದಾರೆ‌. ಈಗ ಬಿಜೆಪಿ ಅಧಿಕಾರ ಇರುವ ರಾಜ್ಯಗಳಲ್ಲಿ ಅದೇ ಮಾದರಿ ಜನಪ್ರಿಯ ಯೋಜನೆಗಳನ್ನು ಘೋಷಿಸುತ್ತಿದ್ದಾರೆ ಎಂದು ಸಿಎ ಸಿದ್ದರಾಮಯ್ಯ ಹೇಳಿದರು.

ವಿಜಯಪುರಕ್ಕೆ ತೆರಳುವ ಮುನ್ನ ಬಸಾಪುರ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಯಾರು ನಮ್ಮ ಗ್ಯಾರಂಟಿ ಯೋಜನೆ ವಿರೋಧಿಸಿದರೋ, ಅವರೇ ಅವುಗಳನ್ನು ಜಾರಿ ಮಾಡುವ ಮಾತಾಡುತ್ತಿದ್ದಾರೆ‌. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅನುಷ್ಠಾನ ಮಾಡುವುದಾಗಿ ಹೇಳುತ್ತಿದ್ದಾರೆ.

ಬಹು ವರ್ಷದಿಂದ ಅಧಿಕಾರದಲ್ಲಿ ಇದ್ದಾರೆ. ಆದರೆ, ಜಾರಿ ಮಾಡಲಿಲ್ಲ. ಈಗ ಚುನಾವಣೆ ಕಾರಣ ಮಾಡುವುದಾಗಿ ಹೇಳುತ್ತಿದ್ದಾರೆ. ಮೋದಿ ಎಂದೂ ನುಡಿದಂತೆ ನಡೆದುಕೊಂಡಿಲ್ಲ ಎಂದು ಟೀಕಿಸಿದರು.

ಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿ ವಿದ್ಯುತ್ ಕದ್ದಿದ್ದಾರೆ. ದಂಡ ಬೇರೆ ಕಟ್ಟಿದ್ದಾರೆ.ಅವರಿಗೆ ಇನ್ನೊಬ್ಬರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ? ಯತೀಂದ್ರ ಬಗ್ಗೆ ಟೀಕಿಸಲು ಇವರ ಬಳಿ ಸೂಕ್ತ ದಾಖಲೆ ಇದೆಯಾ? ಇವರ ಕಾಲದಲ್ಲಿ ವರ್ಗಾವಣರ ಆಗಿಲ್ಲವಾ ? ಏನೇನೂ ಮಾಡಿದ್ದಾರೆ ಎಂದು ಜಗತ್ತಿಗೆ ಗೊತ್ತಿದೆ.

ನನ್ನ ಮೇಲಿನ ದ್ವೇಷ, ಅಸೂಯೆ ಇಂದ ಎಚ್ಡಿಕೆ ನನ್ನ ವಿರುದ್ಧ ಇಲ್ಲ-ಸಲ್ಲದ ಆರೋಪ ಮಾಡುತ್ತಾರೆ ಎಂದು ಎಚ್ಡಿಕೆ ಆರೋಪಗಳಿಗೆ ಪ್ರತ್ಯುತ್ತರ ನೀಡಿದರು. ಸಚಿವರಾದ ಎಂ.ಬಿ.ಪಾಟೀಲ್, ಕೆ.ಎನ್.ರಾಜಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net