ಸಿಎಂ ಪರಿಹಾರ ನಿಧಿಗೆ ಎಸ್‌ಬಿಒಎಫ್‌ನಿಂದ 2 ಲಕ್ಷ ರೂ. ನೆರವು

8manju6-Web
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಲಕ್ಷ ರೂ. ಚೆಕ್‌ಅನ್ನು ಎಸ್‌ಬಿಒಎಫ್ ಮಾಲೀಕ ಸಾವಿಯೋ ಪೆರೆರಾ ನೀಡಿದರು. ಮಾಜಿ ಶಾಸಕ ಅರವಿಂದ ಪಾಟೀಲ, ಉದ್ಯಮಿ ಪ್ರಶಾಂತ ಕೌಜಲಗಿ, ಆನಂದ್ ವಾಜ್ ಮತ್ತಿತರರು ಉಪಸ್ಥಿತರಿದ್ದರು.
Published on

ಬೆಳಗಾವಿ: ಮಹಾಮಾರಿ ಕರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಸಾವಿಯೋ ಪೆರೆರಾ ಮಾಲೀಕತ್ವದ ಎಸ್‌ಬಿಒಎಫ್ ಸಮೂಹವು ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಲಕ್ಷ ರೂ. ನೆರವು ನೀಡಿದೆ. ಅಲ್ಲದೆ, ಕರೊನಾ ತಡೆಗಟ್ಟಲು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ 200 ಸುರಕ್ಷಾ ಕಿಟ್ ವಿತರಿಸಿದೆ.

ಬೆಳಗಾವಿ ನಗರದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಲಕ್ಷ ರೂ. ಚೆಕ್‌ಅನ್ನು ಎಸ್‌ಬಿಒಎಫ್ ಮಾಲೀಕ ಸಾವಿಯೋ ಪೆರೆರಾ ಹಸ್ತಾಂತರಿಸಿದರು. ಮಾಜಿ ಶಾಸಕ ಅರವಿಂದ ಪಾಟೀಲ, ಉದ್ಯಮಿ ಪ್ರಶಾಂತ ಕೌಜಲಗಿ, ಆನಂದ್ ವಾಜ್ ಇತರರು ಇದ್ದರು. ಕರೊನಾ ವೈರಸ್ ತಡೆಗಟ್ಟಲು ಆರೋಗ್ಯ, ಪೊಲೀಸ್ ಇಲಾಖೆ ಸೇರಿ ವಿವಿಧ ಇಲಾಖೆಗಳ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರ ಜನರ ಸಂರಕ್ಷಣೆಗಾಗಿ ಹಲವು ಕ್ರಮ ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಎಸ್‌ಬಿಒಎಫ್ ಗ್ರೂಪ್ ವತಿಯಿಂದ ನೆರವು ನೀಡಲಾಗುತ್ತಿದೆ ಎಂದು ಎಸ್‌ಬಿಒಎಫ್ ಸಮೂಹ ತಿಳಿಸಿದೆ.

ಕರೊನಾ ವೈರಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಮತ್ತು ಜನರನ್ನು ಸಂರಕ್ಷಿಸಲು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗೆ 200 ಸಂರಕ್ಷಣೆ ಕಿಟ್‌ಗಳನ್ನು ಎಸ್‌ಬಿಒಎಫ್ ಸಮೂಹ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿಗೆ ಹಸ್ತಾಂತರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net