ಸಿಎಂ ಪರಿಹಾರ ನಿಧಿಗೆ 5 ಲಕ್ಷ ರೂ. ದೇಣಿಗೆ ನೀಡಿದ ಮಾನಪ್ಪ ವಜ್ಜಲ್

160420 Manappa Vajjal Donation to CM Fund
Published on

ಲಿಂಗಸುಗೂರು : ಕೋವಿಡ್-19 ಸಿಎಂ ಪರಿಹಾರ ನಿಧಿಗೆ ಮಾಜಿ ಶಾಸಕ ಮಾನಪ್ಪ ವಜ್ಜಲ ಅವರು 5 ಲಕ್ಷ ರೂ. ಚೆಕ್ ಅನ್ನು ಬೆಂಗಳೂರಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಗುರುವಾರ ಸಲ್ಲಿಸಿದರು. ಮಾರಣಾಂತಿಕ ಕರೊನಾ ವೈರಸ್ ಭೀತಿಯಿಂದ ರಾಜ್ಯ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಕರೊನಾ ವೈರಸ್ ತಡೆಗೆ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ರಾಜ್ಯದ ಲಕ್ಷಾಂತರ ಬಡವರು, ಕೂಲಿಕಾರ್ಮಿಕರು, ನಿರ್ಗತಿಕರ ಬದುಕು ದುಸ್ತರವಾಗಿದೆ. ಸರ್ಕಾರ ರಾಜ್ಯದ ಜನರ ಒಳಿತಿಗಾಗಿ ಕೋವಿಡ್-19 ಸಿಎಂ ಪರಿಹಾರ ನಿಧಿ ಸ್ಥಾಪಿಸಿದ್ದು, ಪ್ರತಿಯೊಬ್ಬರೂ ತಮ್ಮ ಶಕ್ತಿ ಅನುಸಾರ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net