ಸಿಎಂ ಪರಿಹಾರ ನಿಧಿಗೆ 1 ಲಕ್ಷ ರೂ.

17Huk1-Web
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್‌ನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಹಸೀಲ್ದಾರ್ ಅಶೋಕ ಗುರಾಣಿ, ಮೂಲಕ 1 ಲಕ್ಷ ರೂ. ನೀಡಲಾಯಿತು. ಪವನ ಕತ್ತಿ, ರಮೇಶ ಬಂಡಪ್ಪ ಮುನ್ನೋಳಿ, ಡಾ.ಮೋಹನ ಮುನ್ನೋಳಿ, ಮುರುಗೇಶ ಕತ್ತಿ, ಮಲ್ಲಿಕಾರ್ಜುನ ಬೆಲ್ಲದ, ಶಿವಗೌಡ ಪಾಟೀಲ, ಮಹಾವೀರ ಖೇಮಲಾಪುರೆ ಇತರರು ಇದ್ದರು.
Published on

ಹುಕ್ಕೇರಿ: ಮುಖ್ಯಮಂತ್ರಿ ಕೋವಿಡ್-19 ಪರಿಹಾರ ನಿಧಿಗೆ ಬೆಲ್ಲದ ಬಾಗೇವಾಡಿ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ ವತಿಯಿಂದ ಶುಕ್ರವಾರ 1 ಲಕ್ಷ ರೂ. ಚೆಕ್‌ಅನ್ನು ತಹಸೀಲ್ದಾರ್ ಅಶೋಕ ಗುರಾಣಿ ಅವರಿಗೆ ಹಸ್ತಾಂತರಿಸಲಾಯಿತು. ಅಧ್ಯಕ್ಷ ಪವನ ರಮೇಶ ಕತ್ತಿ ಮಾತನಾಡಿ, ಕರೊನಾ ಸಾಂಕ್ರಾಮಿಕ ರೋಗದಿಂದ ಜನಜೀವನ ಅಸ್ತವ್ಯಸ್ತವಾಗುವುದರ ಜತೆಗೆ ಆರ್ಥಿಕ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದೆ. ಅದಕ್ಕಾಗಿ ಶಾಸಕ ಉಮೇಶ ಕತ್ತಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮತ್ತು ಬ್ಯಾಂಕ್‌ನ ನಿರ್ದೇಶಕರ ಅಭಿಪ್ರಾಯ ಪಡೆದು ಒಂದು ಲಕ್ಷ ರೂ. ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡುತ್ತಿದ್ದೇವೆ ಎಂದರು.ತಹಸೀಲ್ದಾರ್ ಅಶೋಕ ಗುರಾಣಿ ಮಾತನಾಡಿ, ಸಹಕಾರಿ ಸಂಘ ಸಂಸ್ಥೆಗಳ ಜತೆಗೆ ಖಾಸಗಿ ಹಣಕಾಸು ಸಂಸ್ಥೆಗಳು, ಸಮಾಜದ ಗಣ್ಯರು ಸರ್ಕಾರಕ್ಕೆ ನೆರವಿನ ಹಸ್ತ ಚಾಚಿದಲ್ಲಿ ಕಷ್ಟದ ಪರಿಸ್ಥಿತಿ ಎದುರಿಸಲು ಸಹಾಯವಾಗುತ್ತದೆ ಎಂದರು.

ಉಪಾಧ್ಯಕ್ಷ ರಮೇಶ ಬಂಡಪ್ಪ ಮುನ್ನೋಳಿ, ನಿರ್ದೇಶಕರಾದ ಡಾ.ಮೋಹನ ಮುನ್ನೋಳಿ, ಮುರುಗೇಶ ಕತ್ತಿ, ಮಲ್ಲಿಕಾರ್ಜುನ ಬೆಲ್ಲದ, ಶಿವಗೌಡ ಪಾಟೀಲ, ಮಹಾವೀರ ಖೇಮಲಾಪುರೆ, ಆರ್.ಟಿ. ಶಿರಾಳಕರ, ಸುರೇಶ ಬೆಲ್ಲದ, ಸಿದ್ದಪ್ಪ ಹಾಗರಗಿ, ಕಿಶೋರ ಕತ್ತಿ, ಶಮ್ಶುದ್ದೀನ್ ಪಠಾಣ, ಮನೋಹರ ಶ್ರೀಖಂಡೆ, ವಿನಾಯಕ ಬುರ್ಜಿ, ಲಕ್ಷ್ಮಣ ಕರಿಗಾರ, ವಿಜಯಲಕ್ಷ್ಮೀ ಶೆಟ್ಟಿ, ಸಂಜೀವಿನಿ ತೇರದಾಳ, ಆಫ್ರೀನ್ ಅಮ್ಮಣಗಿ, ಸಲಹೆಗಾರ ಎಂ.ಕೆ. ಅಮ್ಮಣಗಿ, ಪ್ರಧಾನ ವ್ಯವಸ್ಥಾಪಕ ಸುನೀಲ ಬೆಲ್ಲದ, ಮುಖ್ಯ ಲೇಖಾಪಾಲಕ ಶ್ರೀಶೈಲ ಚರಾಟಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net