

ಬೆಂಗಳೂರು: ಮುಖ್ಯಮಂತ್ರಿಯವರ ವೈದ್ಯಕಿಯ ಪರಿಹಾರ ನಿಧಿ ಸೊಸೈಟಿಯ ನಿಧಿಯಿಂದ 2023&24 ಮತ್ತು 2024&25ನೇ ಸಾಲುಗಳಲ್ಲಿ 57,738 ಬಡ ರೋಗಿಗಳು ಪ್ರಯೋಜನ ಪಡೆದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದಾರೆ.
2023&24ನೇ ಸಾಲಿನಲ್ಲಿ 30,296, 2024&25ನೇ ಸಾಲಿನಲ್ಲಿ 27,442 ಫಲಾನುಭವಿಗಳಿಗೆ ವೆಚ್ಚ ಭರಿಸಲಾಗಿರುತ್ತದೆ. 2025&26ನೇ ಸಾಲಿನಲ್ಲಿ ಕಾರ್ಪಸ್ ನಿಶ್ಚಿತ ಮೊತ್ತದ ಬಡ್ಡಿಯಿಂದ ಬಂದಿರುವ 9.30 ಕೋಟಿಗಳನ್ನು ಹಂಚಿಕೆ ಮಾಡಲು ಕ್ರಮ ವಹಿಸಲಾಗಿರುತ್ತದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಯವರ ವೈದ್ಯಕಿಯ ಪರಿಹಾರ ನಿಧಿ ಸೊಸೈಟಿಯ ಕಾರ್ಪಸ್ ಹಣ 110 ಕೋಟಿಗಳನ್ನು ನಿಶ್ಚಿತ ಠೇವಣಿಯಲ್ಲಿಡುವ ಮುಖಾಂತರ ಬರುವ ಬಡ್ಡಿ ಹಣದಲ್ಲಿ ರಾಜ್ಯದಲ್ಲಿ ಗಂಭೀರ ಹಾಗೂ ಅತೀ ವಿರಳ ರೋಗಗಳಿಂದ ನಿರಂತರವಾಗಿ ಬಳಲುತ್ತಿರುವ ಬಡ ರೋಗಿಗಳ ಚಿಕಿತ್ಸೆಯನ್ನು ಸರ್ಕಾರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಒದಗಿಸಿ, ಅದರ ವೆಚ್ಚವನ್ನು ಭರಿಸಿ, ರೋಗಿಗಳಿಗೆ ಸರ್ಕಾರದ ವತಿಯಿಂದ ನೆರವು ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ, ಶ್ರೀ ಜಯದೇವ ಹೃದ್ರೋಗ ಸಂಸ್ಥೆ, ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಎಸ್ಡಿಎಸ್ಟಿಬಿ ಆಸ್ಪತ್ರೆ, ನೆಫೋ ಯೂರಾಲಜಿ ಸಂಸ್ಥೆ, ಪಿಎಂ ಎಸ್ಎಸ್ವೈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಮಿಂಟೋ ಪ್ರಾದೇಶಿಕ ಚ್ಢಕಣ್ಣಿನ ಆಸ್ಪತ್ರೆ, ಗ್ಯಾಸ್ಟ್ರೊ ಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ಪ್ಲಾಂಟ್ ಸಂಸ್ಥೆಗಳು ಈ ಅನುದಾನವನ್ನು ಬಳಕೆ ಮಾಡಿಕೊಂಡಿರುತ್ತವೆ ಎಂದಿದ್ದಾರೆ.
ಅಲ್ಲದೆ, ರಾಯಚೂರು ವೈದ್ಯಕಿಯ ವಿಾನಗಳ ಸಂಸ್ಥೆ, ವಾಣಿ ವಿಲಾಸ ಆಸ್ಪತ್ರೆ ಬೆಂಗಳೂರು ಮತ್ತು ಮೈಸೂರು ವೈದ್ಯಕಿಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗಳು ಸೂಪರ್ ಸ್ಪೆಷಾಲಿಟಿ ಅಡಿಯಲ್ಲಿ ಮುಖ್ಯಮಂತ್ರಿಯವರ ವೈದ್ಯಕಿಯ ಪರಿಹಾರ ನಿಧಿ ಸೊಸೈಟಿಯ ಅನುದಾನಕ್ಕೆ ಬೇಡಿಕೆ ಸಲ್ಲಿಸಿರುತ್ತವೆ ಎಂದು ಹೇಳಿದ್ದಾರೆ.