ಮಳೆ ನಡುವೆಯೇ ಸಿಎಂ ಕಾರ್ಯಕ್ರಮ

15 HVR 4
Published on

ಶಿಗ್ಗಾಂವಿ: ಸಿಎಂ ನೇತೃತ್ವದಲ್ಲಿ ಶಿಗ್ಗಾಂವಿ ತಾಲೂಕಿನ ತಡಸ ಹಾಗೂ ಶಿಗ್ಗಾಂವಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳಿಗೆ ಮಳೆರಾಯ ಅಡ್ಡಿಪಡಿಸಿದ. ಶಿಗ್ಗಾಂವಿಯಲ್ಲಿ ನಾಲ್ಕೈದು ಕಡೆ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮ ಮುಗಿಸಿ ವೇದಿಕೆ ಬಳಿ ಬರುತ್ತಿದ್ದಂತೆ ಮಳೆ ಸುರಿಯಿತು. ವೇದಿಕೆ ಮುಂಭಾಗದಲ್ಲಿದ್ದ ಜನ ಎದ್ದು ಹೊರಟಿದ್ದರು. ಸ್ವಲ್ಪ ಸಮಯದ ನಂತರ ಮಳೆ ನಿಂತಿತು. ನೇರವಾಗಿ ವೇದಿಕೆಗೆ ತೆರಳಿದ ಸಿಎಂ ಮೈಕ್, ಲೈಟ್ ಎಲ್ಲ ಆನ್ ಮಾಡಿಸಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಮಳೆ ಬಂದದ್ದು ಶುಭಶಕುನ ಎಂದು ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net