ಸಿದ್ದರಾಮಯ್ಯ ಯಾವುದಕ್ಕೂ ಬಗ್ಗಲ್ಲ: ಸಂಸದ ರಾಜಶೇಖರ ಹಿಟ್ನಾಳ

cm muda issue mp koppal rajashekhar hitnala reaction
Published on

ಕೊಪ್ಪಳ: ರಾಜ್ಯಪಾಲರ ನಡೆ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್​ಗೆ ಸಲ್ಲಿಸಿದ ಅರ್ಜಿ ವಜಾ ಆಗಿದೆ. ನ್ಯಾಯಾಲಯದ ತೀರ್ಪಿಗೆ ತಲೆ ಬಾಗುತ್ತೇವೆ. ಕಾನೂನು ಹೋರಾಟಕ್ಕೆ ಇನ್ನೂ ಅವಕಾಶವಿದೆ. ಸಿದ್ದರಾಮಯ್ಯ ಯಾವುದಕ್ಕೂ ಬಗ್ಗುವುದಿಲ್ಲ. ರಾಜೀನಾಮೆ ನೀಡುವ ಪ್ರಶ್ನೆ ಇಲ್ಲವೆಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ಮುಡಾ ಪ್ರಕರಣದಲ್ಲಿ ಹುರುಳಿಲ್ಲ. ವಿಪಕ್ಷಗಳು ರಾಜಕೀಯ ಕಾರಣಕ್ಕೆ ರಾಜೀನಾಮೆ ಕೇಳುತ್ತಿವೆ. ಅವರಿಗೂ ಇದರ ಅರಿವಿದೆ. ಪ್ರಕರಣದಲ್ಲಿ ಸಿಎಂ ಪಾತ್ರ ಇಲ್ಲ. ಅವ್ಯವಹಾರ ನಡೆದಿಲ್ಲ. ಬಿಜೆಪಿ ಸರ್ಕಾರ ಇದ್ದಾಗಲೇ ಸೈಟ್​ ಹಂಚಿಕೆ ಮಾಡಿದೆ. ಹೀಗಿದ್ದರೂ ವೃತಾ ಆರೋಪ ಮಾಡುತ್ತಿದ್ದಾರೆ. ಹೈಕೋರ್ಟ್​ನಲ್ಲಿ ಸಿಎಂ ವಿರುದ್ಧ ತೀರ್ಪು ಬಂದಿದೆ. ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಎಷ್ಟೋ ಪ್ರಕರಣಗಳಲ್ಲಿ ಹೈ ಕೋರ್ಟ್​ನಲ್ಲಿ ಸೋಲಾದರೂ, ಸುಪ್ರೀಂಕೋರ್ಟ್​ನಲ್ಲಿ ಗೆಲುವಾದ ಉದಾಹರಣೆ ಇದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಹೀಗೆ ಮಾಡುತ್ತಿದ್ದಾರೆ. ನಾವು ಹಾಗೂ ಪಕ್ಷ ಅವರ ಪರವಾಗಿದೆ. ಇಂಥದ್ದಕ್ಕೆಲ್ಲ ಅವರು ಜಗ್ಗುವುದು ಇಲ್ಲ. ಬಗ್ಗುವುದು ಇಲ್ಲ. ಕಾಂಗ್ರೆಸ್​ ಹಿರಿಯ ನಾಯಕರು ತಾವೂ ಸಿಎಂ ಸ್ಥಾನದ ಆಕಾಂಗಳೆಂದು ಹೇಳುವುದು ಅವರ ವೈಯಕ್ತಿಕ ಅಭಿಪ್ರಾಯ. ಶಾಸಕರಾದವರೂ ಸಿಎಂ ಆಗಲು ಕಾನೂನಿನಲ್ಲಿ ಅವಕಾಶವಿದೆ. ಯಾರಾದರೂ ಆಗಬಹುದು. ಆದರೆ, ಕೆಪಿಸಿಸಿ, ಎಐಸಿಸಿ ನಾಯಕರು ಅಥವಾ ಉಸ್ತುವಾರಿಗಳು ಸಿಎಂ ಬದಲಾವಣೆ ಬಗ್ಗೆ ಎಲ್ಲಿಯೂ ಹೇಳಿಲ್ಲವೆಂದು ಸಮರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net