

ಕಾರವಾರ: ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಜಿಲ್ಲೆಯ 7 ಜನರಿಗೆ ಮುಖ್ಯಮಂತ್ರಿಯ ಚಿನ್ನದ ಪದಕ ದೊರಕಿದೆ.
ಬೆಂಗಳೂರಿನ ಆರ್.ಎ.ಮುಂಡ್ಕೂರು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಅವರು ಪದಕ ಪ್ರಧಾನ ಮಾಡಿದರು. 2021, 2022 ಹಾಗೂ 2023 ನೇ ಸಾಲಿಗೆ ಸಂಬಂಧಿಸಿದಂತೆ ಪದಕ ಪ್ರದಾನ ಮಾಡಲಾಯಿತು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಂಜುನಾಥ ಎಚ್.ಸಾಲಿ, ಭಟ್ಕಳ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಮೇಶ ಎಸ್., ಉಡುಪಿ ಜಿಲ್ಲೆಯ ಬಂಟ್ವಾಳ ಅಗ್ನಿಶಾಮಕ ಠಾಣೆಯ ನಿವೃತ್ತ ಸಹಾಯಕ ಠಾಣಾಧಿಕಾರಿ ಅನಂತ ಜೆ. ಅಂಬಿಗ, ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ನಿವೃತ್ತ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ವೆಂಕಟರಮಣ ಎಲ್. ನಾಯಕ, ಅಂಕೋಲಾ ಅಗ್ನಿಶಾಮಕ ಠಾಣೆಯ ನಿವೃತ್ತ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಉಮೇಶ ಎನ್. ನಾಯ್ಕ, ಬೆಂಗಳೂರು ಇಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಜೀವನ ಜೆ. ಬೊಬ್ರುಕರ್, ಭಟ್ಕಳ ಅಗ್ನಿಶಾಮಕ ಠಾಣೆಯ ಅಗ್ನಿಶಾಮಕ ಚಂದ್ರು ಮೊಗೆರ ಅವರು ಪದಕ ಸ್ವೀಕರಿಸಿದರು.
ಇದನ್ನೂ ಓದಿ:ಶಿಸ್ತು, ಉತ್ಸಾಹ ಹೆಚ್ಚಲು ಕ್ರೀಡೆ ಸಹಕಾರಿ