ಪೊಲೀಸರಿಗೆ ಸಿಎಂ ಪದಕ ಪ್ರದಾನ

medal
Published on

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ 2017-18ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಶುಕ್ರವಾರ ಬೆಂಗಳೂರು ವಿಧಾನಸೌಧದಲ್ಲಿರುವ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಪದಕ ಪ್ರದಾನ ಮಾಡಿದರು.

ಉಡುಪಿ ಎಸ್ಪಿ ವಿಷ್ಣುವರ್ಧನ, ಡಿವೈಎಸ್ಪಿ ಟಿ.ಆರ್.ಜೈ ಶಂಕರ್, ಪಶ್ಚಿಮ ವಲಯದ ಬೆರಳಚ್ಚು ವಿಭಾಗದ ಡಿವೈಎಸ್ಪಿ ಗೌರೀಶ್ ಎ.ಸಿ., ಕರಾವಳಿ ಕಾವಲು ಪಡೆ ಇನ್‌ಸ್ಪೆಕ್ಟರ್ ರವೀಶ್ ನಾಯಕ್, ಕುಂದಾಪುರ ಇನ್‌ಸ್ಪೆಕ್ಟರ್ ಕೆ.ಆರ್.ಗೋಪಿಕೃಷ್ಣ, ಉಡುಪಿ ನಗರ ಸರ್ಕಲ್ ಇನ್‌ಸ್ಪೆಕ್ಟರ್ ಮಂಜುನಾಥ್, ಡಿಎಆರ್ ಹೆಡ್ ಕಾನ್‌ಸ್ಟೇಬಲ್ ಸಂತೋಷ್ ಜೆ., ಮಂಗಳೂರು ನಗರ ಸಿಸಿಬಿ ಎಎಸ್‌ಐ ಹರೀಶ್ ಪದವಿನಂಗಡಿ, ಹೆಡ್ ಕಾನ್‌ಸ್ಟೇಬಲ್ ಎನ್.ಎ.ಚಂದ್ರಶೇಖರ, ಉಳ್ಳಾಲ ಠಾಣೆ ಎಎಸ್‌ಐ ಎಂ.ಸುಂದರ, ಕಾವೂರು ಠಾಣೆ ಹೆಡ್ ಕಾನ್‌ಸ್ಟೇಬಲ್ ಕೆ.ಗೋಪಾಲಕೃಷ್ಣ, ಗುಪ್ತವಾರ್ತೆ ಹೆಡ್ ಕಾನ್‌ಸ್ಟೆಬಲ್ ರಶೀದ್ ಅಹಮದ್ ತಹಸೀಲ್ದಾರ್, ಬಂಟ್ವಾಳ ಠಾಣೆ ಹೆಡ್ ಕಾನ್‌ಸ್ಟೇಬಲ್ ಉದಯ ರೈ, ಸಿಎಆರ್ ಹೆಡ್ ಕಾನ್‌ಸ್ಟೇಬಲ್ ವರುಣ್ ಆಳ್ವ ಸೇರಿದಂತೆ ರಾಜ್ಯದ 243 ಮಂದಿ ಪೊಲೀಸರು ಸಿಎಂ ಪದಕ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net