

ಮದ್ದೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ಹೋಟೆಲ್ ಒಂದರ ಬಳಿ ಮದ್ದೂರು ವಡೆ ಸವಿದು ಕಾಫಿ ಸೇವನೆ ಮಾಡಿದರು. ಕಾರಿನಲ್ಲೆ ಕುಳಿತು ಸಾವಧಾನವಾಗಿ ಸಂಜೆಯ ಲಘು ಉಪಾಹಾರ ಸೇವಿಸಿದ ಅವರು ಜಾಲಿ ಮೂಡ್‌ನಲ್ಲಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ರೊಂದಿಗೆ ಉಭಯ ಕುಶಲೋಪರಿ ಮಾತನಾಡಿದರು. ನಂತರ ಲೋಕಸಭಾ ಚುನಾವಣೆ ತಾಲೂಕಿನಲ್ಲಿ ಯಾವ ರೀತಿ ನಡೆಯಿತು ಎಂಬ ಬಗ್ಗೆ ಕೆಲಕಾಲ ಚರ್ಚಿಸಿದರು. ನಂತರ ಕಾರಿನಲ್ಲಿ ಬೆಂಗಳೂರಿಗೆ ತೆರಳಿದರು. ಪುರಸಭಾ ಮಾಜಿ ಅಧ್ಯಕ್ಷ ಎಂ.ಪಿ.ಅಮರ್‌ಬಾಬು, ಮುಖಂಡರಾದ ಡಾಬಾ ಮಹೇಶ್, ಅರುಣ್‌ಕುಮಾರ್, ಅಭಿಷೇಕ್ ಇದ್ದರು.