

ಮುಂಡರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ಬಾರಿಗೆ ರಾಜ್ಯ ಬಜೆಟ್ ಮಂಡನೆ ಮಾಡಿದ್ದರಿಂದ ತಾಲೂಕಿನ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ತಾಲೂಕು ಕುರುಬರ ಸಮಾಜದ ಅಧ್ಯಕ್ಷ ಮಂಜುನಾಥ ಮುಂಡವಾಡ ಮಾತನಾಡಿ, ದಾಖಲೆಯ 14ನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದು ಹೆಮ್ಮೆ ಪಡುವ ವಿಷಯವಾಗಿದೆ.
ಸಿದ್ದರಾಮಯ್ಯನವರು ರಾಜ್ಯದ ಅಭಿವೃದ್ಧಿಗೆ ತಮ್ಮದೆ ಆದ ವಿಶೇಷ ಕಾಳಜಿ ಹೊಂದಿದ್ದಾರೆ ಎಂದರು.
ದುದ್ದು ಹಣಗಿ, ದೇವಪ್ಪ ಚಿಕ್ಕಣ್ಣವರ, ಶರಣಪ್ಪ ಮುದಿಯಜ್ಜನರ, ಎ.ಪಿ. ದಂಡಿನ, ಸುರೇಶ ಬಣಕಾರ, ಅಡಿವೆಪ್ಪ ಚಲವಾದಿ, ಮುತ್ತು ಬಳ್ಳಾರಿ, ಲಕ್ಷ್ಮಣ ಕಾಗನೂರ, ಮಲ್ಲೇಶ ಮೇಟಿ, ಮಂಜುನಾಥ ಕಟ್ಟಿಮನಿ, ಶಶಿಕುಮಾರ ದೊಡ್ಡಮನಿ, ಶರಣಯ್ಯ ಹಿರೇಮಠ, ಪ್ರಾಣೇಶ ಚೌಡ್ಕಿ ಇತರರು ಇದ್ದರು.