ಸಿಎಂ ಹಿಂದುಳಿದ ವರ್ಗದ ನಾಯಕ

CM is a leader of backward classes
ಪ್ರೊ. ರಾಜು ಆಲಗೂರ, ಮಾಜಿ ಶಾಸಕ
Published on

ವಿಜಯಪುರ: ಹಿಂದುಳಿದ ವರ್ಗದ ಬಗ್ಗೆ ಯಾರಾದರೂ ಕಾಳಜಿ ಹೊಂದಿದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಮಾಜಿ ಶಾಸಕ ಪ್ರೊ. ರಾಜು ಆಲಗೂರ ಬಣ್ಣಿಸಿದ್ದಾರೆ.

ಸಿಎಂ ಅಹಿಂದ ವರ್ಗದ ವಿರೋಧಿ ಎಂದಿರುವ ಸಂಸದ ರಮೇಶ ಜಿಗಜಿಣಗಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ರಾಜ್ಯದಲ್ಲಿ ದಲಿತ ನೌಕರರಿಗೆ ಬಡ್ತಿ ಮೀಸಲಾತಿ ನಿಂತು ಹೋಗಿತ್ತು.

ಆ ಬೇಡಿಕೆಯನ್ನು ಈಡೇರಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಎಸ್​ಇಪಿ, ಟಿಎಸ್​ಪಿ ಕಾಯ್ದೆ ರಚಿಸಿ ದಲಿತರ ಅಭಿವೃದ್ಧಿಗೆ ಯೋಜನೆ ಅನುಷ್ಠಾನಕ್ಕೆ ತಂದಿದ್ದಾರೆ. ಸದಾಶಿವ ಆಯೋಗ ರಚನೆ ಮಾಡಿದ್ದು ಕಾಂಗ್ರೆಸ್​ ಪ. ಸದ್ಯ ದತ್ತಾಂಶವನ್ನು ನೈಜವಾಗಿ ಸರ್ವೇ ಮಾಡಲು ಆದೇಶಿಸಿದ್ದು, ಎರಡು ತಿಂಗಳಲ್ಲಿ ಸಮೀಕ್ಷೆ ಮುಗಿದ ಮೇಲೆ ಖಂಡಿತವಾಗಿ ಅದನ್ನು ಜಾರಿ ಮಾಡುತ್ತಾರೆ ಎಂದು ಮಾಜಿ ಶಾಸಕರು ಸಂಸದರಿಗೆ ತಿರುಗೇಟು ನೀಡಿದ್ದಾರೆ.

ಸಂಸದ ರಮೇಶ ಜಿಗಜಿಣಗಿ 40 ವರ್ಷ ಅಧಿಕಾರದಲ್ಲಿ ಇದ್ದವರು. ಎಂದಿಗೂ ಸಾಮಾಜಿಕ ನ್ಯಾಯದ ಪರವಾಗಿ ಮಾತನಾಡಿಲ್ಲ. ಹೋರಾಟ ಕೂಡ ಮಾಡಿಲ್ಲ. ಅವರ ಮನಸ್ಸು, ನೀತಿ, ಕೃತಿಗಳೆಲ್ಲವೂ ಪುರೋಹಿತಶಾಹಿ ಪರವಾಗಿ ಇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತನಾಡುವ ನೈತಿಕ ಹಕ್ಕು ಅವರಿಗೆ ಇಲ್ಲ ಎಂದು ಪ್ರೊ. ರಾಜು ಆಲಗೂರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net