ಬಸ್​ನಿಲ್ದಾಣ ಉದ್ಘಾಟನೆಗೆ ಸಿಎಂಗೆ ಆಹ್ವಾನ

17sdp1
Published on

ಸಿದ್ದಾಪುರ: ಪಟ್ಟಣದಲ್ಲಿ ನೂತನವಾಗಿ ನಿರ್ವಿುಸಿರುವ ಮಿನಿ ವಿಧಾನಸೌಧದಲ್ಲಿ ಕಂದಾಯ ಇಲಾಖೆಯ ಅಗತ್ಯಕ್ಕೆ ತಕ್ಕಂತೆ ರೆಕಾರ್ಡ್ ರೂಂ, ಆರ್​ಟಿಸಿ ವ್ಯವಸ್ಥೆ, ಕೋರ್ಟ್​ಹಾಲ್, ಸಭಾಭವನ ಇತ್ಯಾದಿ ಸಕಲ ವ್ಯವಸ್ಥೆಗೂ ಅನುಕೂಲವಾಗುವಂತೆ ಲೋಕೋಪಯೋಗಿ ಇಲಾಖೆ ಸುಸಜ್ಜಿತವಾಗಿ ನಿರ್ವಿುಸಿಕೊಟ್ಟಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಮಿನಿ ವಿಧಾನಸೌಧ ಕಟ್ಟಡ ಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ನೂತನ ಬಸ್​ನಿಲ್ದಾಣ ಕಟ್ಟಡ ತಯಾರಾಗಿದ್ದು, ಕರೊನಾ ಅಲೆ ಹಾಗೂ ಮಳೆಯ ಅಬ್ಬರ ಕಡಿಮೆಯಾದ ನಂತರ ಉದ್ಘಾಟನೆಗೆ ಮುಖ್ಯಮಂತ್ರಿಯನ್ನು ಆಹ್ವಾನಿಸುವ ಆಲೋಚನೆ ಇದೆ ಎಂದರು.
ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಸೀಲ್ದಾರ್ ಪ್ರಸಾದ ಎಸ್.ಎ, ತಾಪಂ ಇಒ ಪ್ರಶಾಂತರಾವ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net