ನವೆಂಬರ್ ಎರಡನೇ ವಾರದಲ್ಲಿ ಕೆಪಿಎಸ್‌ಗಳ ಆರಂಭಕ್ಕೆ ಸಿಎಂ ಗುದ್ದಲಿಪೂಜೆ

education minister madhu bandarappa press meet
Published on

ಶಿವಮೊಗ್ಗ: ರಾಜ್ಯದಲ್ಲಿ 2 ಸಾವಿರ ಕೋಟಿ ರೂ. ವೆಚ್ಚದಲ್ಲಿ 800 ಕೆಪಿಎಸ್(ಕರ್ನಾಟಕ ಪಬ್ಲಿಕ್ ಸ್ಕೂಲ್)ಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ತೆರೆಯಲಾಗುತ್ತಿದೆ. ನವೆಂಬರ್ ಎರಡನೇ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಮೊಗ್ಗದಲ್ಲಿ ಕೆಪಿಎಸ್‌ಗಳ ಆರಂಭಕ್ಕೆ ಗುದ್ದಲಿಪೂಜೆ ನಡೆಸಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲು 500 ಕೆಪಿಎಸ್ ತೆರೆಯಲು ಗುರಿ ಹೊಂದಿದ್ದೆವು. ನಂತರ ಗಣಿಗಾರಿಕೆ ಬಾಧಿತ 10 ಜಿಲ್ಲೆಗಳಲ್ಲಿ 100 ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಅನುಷ್ಠಾನ ಯೋಜನೆಯಡಿ 200 ಶಾಲೆಗಳನ್ನು ಹೆಚ್ಚುವರಿಯಾಗಿ ತೆರೆಯಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೊಂದು ಕೆಪಿಎಸ್‌ಗಳನ್ನು ತೆರೆಯಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2018ಕ್ಕೂ ಪೂರ್ವದಲ್ಲಿ ಕೇವಲ 308 ಕೆಪಿಎಸ್‌ಗಳಿದ್ದವು. ಇದೀಗ ರಾಜ್ಯದಲ್ಲಿ ಕೆಪಿಎಸ್‌ಗೆ ಬದಲಾಯಿಸಲು 9,500 ಶಾಲೆಗಳನ್ನು ಗುರುತಿಸಲಾಗಿದೆ. ಒಂದೇ ಸೂರಿನಡಿ ಯೋಜನೆಯ ಸಮರ್ಪಕ ಅನುಷ್ಠಾನದಿಂದ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಸೌಲಭ್ಯ, ಒಂದೇ ಶಾಲಾ ಆವರಣದಲ್ಲಿ 14 ವರ್ಷದವರೆಗೆ ಎಲ್ಲ ರೀತಿಯ ಶಿಕ್ಷಣ, 1ರಿಂದ 5ರವರೆಗೆ ಕನ್ನಡ ಕಡ್ಡಾಯ ಹಾಗೂ ದ್ವಿಭಾಷಾ ಕಲಿಕೆಗೆ ಅವಕಾಶ, ಮಕ್ಕಳ ಭಾಷಾ ಕಲಿಕೆಯನ್ನಾಧರಿಸಿ 6ನೇ ತರಗತಿಯ ನಂತರ ಮಾಧ್ಯಮ ಆಯ್ಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net