ಪಿಎಲ್‌ಡಿ ಬ್ಯಾಂಕ್ ಸುಧಾರಣೆ ಸಹಕಾರ

RAYAREDDY
ಕುಕನೂರು ತಾಲೂಕಿನ ಭಾನಾಪುರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಶಾಸಕ ಬಸವರಾಜ ರಾಯರಡ್ಡಿ ಭಾನುವಾರ ಉದ್ಘಾಟಿಸಿದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಮಠದ, ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕ ದಸ್ತಗಿರಿ ಅಲಿ, ಸಹಾಯಕ ಉಪನಿಬಂಧಕ ಪ್ರಕಾಶ ಸಜ್ಜನ್ ಇತರರಿದ್ದರು.
Published on

ಕುಕನೂರು: ಸಹಕಾರ ಸಂಸ್ಥೆ ಹಾಗೂ ರಾಜಕೀಯದಲ್ಲಿ ವಂಶ ಪರಂಪರೆ ಆಡಳಿತ ಹೆಚ್ಚಾಗುತ್ತಿದ್ದು, ಇದಕ್ಕೆ ಸರ್ಕಾರದಲ್ಲಿ ಕಾನೂನು ರೂಪಿಸುವುದು ಅಗತ್ಯವಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಭಾನಾಪುರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ಪ್ರತಿಯೊಂದು ಗ್ರಾಪಂ ಮಟ್ಟದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಚನೆ ಮಾಡಲು ಮುಂದಾಗಿದೆ. ಅಲ್ಲದೇ ಸರ್ಕಾರ ಮಾಡದ ಕೆಲಸವನ್ನು ಸಹಕಾರ ಸಂಘಗಳು ಮಾಡುತ್ತಿವೆ. ರೈತರಿಗೆ 5 ಲಕ್ಷ ರೂ. ವರೆಗೂ ಬಡ್ಡಿ ರಹಿತ ಸಾಲ ಸೌಲಭ್ಯ ಕೂಡ ದೊರೆಯುತ್ತದೆ.

ಗದಗ ಜಿಲ್ಲೆಯ ಕನಗಿನಹಾಳದಲ್ಲಿ 1,905 ರಲ್ಲಿ ಸಿದ್ದನಗೌಡ ಪಾಟೀಲ್ ಅವರು ಸ್ಥಾಪಿಸಿದ್ದು, ಇದು ಹೆಮ್ಮರವಾಗಿ ಬೆಳೆದಿದೆ. ರಾಜ್ಯವು ಸಹಕಾರ ಕ್ಷೇತ್ರದಲ್ಲಿ 3ನೇ ಸ್ಥಾನದಲ್ಲಿದೆ. 46 ಸಾವಿರ ವಿವಿಧೋದ್ದೇಶ ಸಹಕಾರ ಸಂಘಗಳಿದ್ದು, 2.5 ಕೋಟಿ ಜನರು ಸದಸ್ಯರಿದ್ದಾರೆ. ಯಲಬುರ್ಗಾ ಕ್ಷೇತ್ರದಲ್ಲಿ 33 ಸಹಕಾರಿ ಸಂಘಗಳಿದ್ದು, ಇನ್ನೂ ಪ್ರಸಕ್ತ ವರ್ಷದಲ್ಲಿ 8 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಚನೆ ಮಾಡಲಾಗುವುದು. ಯಲಬುರ್ಗಾ ಪಿಎಲ್‌ಡಿ ಬ್ಯಾಂಕ್ ಸುಧಾರಣೆ ಹೆಚ್ಚು ಸಹಕಾರ ನೀಡಲಾಗುವುದು. ಸಹಕಾರ ಕ್ಷೇತ್ರದ ಪ್ರಗತಿಗೆ ಹೆಚ್ಚು ಒತ್ತು ನೀಡಿ, ಈ ಕ್ಷೇತ್ರದ ಪ್ರಗತಿಯತ್ತ ತೆಗೆದುಕೊಂಡು ಹೋಗಲಾಗುವುದು ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಮಠದ, ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕ ದಸ್ತಗಿರಿ ಅಲಿ, ಸಹಾಯಕ ಉಪನಿಬಂಧಕ ಅಧಿಕಾರಿ ಪ್ರಕಾಶ ಸಜ್ಜನ್, ಸಹಕಾರ ಸಂಘದ ಮುಖ್ಯ ಪ್ರಬಂಧಕ ಬಸವರಾಜ ಮಠದ, ತಳಕಲ್ ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಗೌಡರ ಮೇಟಿಗೌಡರ, ಗ್ರಾಪಂ ಅಧ್ಯಕ್ಷ ಕರಿಯಪ್ಪ ಹಳ್ಳಿಕೇರಿ, ಉಪಾಧ್ಯಕ್ಷೆ ಪವಿತ್ರಾ ಬಂಗೇರ, ಸದಸ್ಯರಾದ ನೀಲಕಂಠಯ್ಯ ಸಸಿಮಠ, ರೇಣುಕಾ ತಳವಾರ, ದೇವೇಂದ್ರಪ್ಪ ಕಮ್ಮಾರ, ಭೀಮಯ್ಯ ಸಸಿ, ಮೈಲಾರಗೌಡ, ಪ್ರಮುಖರಾದ ಕೃಷ್ಣಾ ಇಟ್ಟಂಗಿ, ಹನುಮೇಶ ಕಡೆಮನಿ, ಅಶೋಕ ತೋಟದ, ನಿಂಗನಗೌಡ ಡಂಬಳ, ಭೀಮಣ್ಣ , ಸಂಕ್ರಪ್ಪ ಜಗ್ಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net