ವರ್ಗಾವಣೆ ದಂಧೆ ಹಿಂದಿನಿಂದ ಇದೆ:ಬಸವರಾಜ ರಾಯರಡ್ಡಿ

CM finance adviser Basavaraj arayaraddi officers transfer issue fraud koppal kukanoor
BASAVARAJ RAYARADDI
Published on

ಕೊಪ್ಪಳ: ಅಧಿಕಾರಿಗಳ ವರ್ಗಾವಣೆ ಒಂದು ದಂಧೆ. ಇದು ಮೊದಲಿನಿಂದಲೂ ಇದೆ. ಹೀಗಾಗಬಾರದು ಎಂಬುದು ನನ್ನ ಅಭಿಪ್ರಾಯ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಅಧಿಕಾರಿಗಳ ವರ್ಗಾವಣೆ ಎಲ್ಲ ಸರ್ಕಾರಗಳಲ್ಲೂ ನಡೆಯುತ್ತದೆ. ಈಗಲೂ ಇದೆ. ಪಾರದರ್ಶಕತೆ ಇಲ್ಲದಿರುವುದು ಬೇಸರದ ಸಂಗತಿ. ಇದು ನಿಲ್ಲಬೇಕು ಎಂದು ನಾನು ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿರುವೆ. ಅದರಂತೆ ಅವರು ಪಾರದರ್ಶಕತೆ ಕಾಯ್ದುಕೊಂಡಿದ್ದಾರೆ. ನಾನು ಕೊಪ್ಪಳ ಎಸ್ಪಿ ವರ್ಗಾವಣೆ ವಿಷಯವಾಗಿ ಯಾರ ಪರವಾಗಿಯೂ ಲಾಭಿ ಮಾಡಿಲ್ಲ. ಯಾವ ಅಧಿಕಾರಿ ಎಸ್ಪಿಯಾಗಿ ಬಂದರೆ ನನಗೇನು ? ನಾವು ತೊಂಭತ್ತರ ದಶಕದಿಂದ ಶಾಸಕರಾದವರು. ಎಲ್ಲವನ್ನೂ ಕಂಡಿದ್ದೇವೆ. ವರ್ಗಾವಣೆ ದಂಧೆ ಆಗಬಾರದು ಎಂಬುದು ನನ್ನ ಆಶಯ. ಅದನ್ನೇ ಹೇಳಿದ್ದೇನೆ ಎಂದು ಬುಧವಾರ ಕುಕನೂರು ತಾಲೂಕಿನ ಕೋಮಲಾಪುರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಇತ್ತೀಚೆಗೆ ಕೊಪ್ಪಳ ಎಸ್ಪಿ ಯಶೋದಾ ವಂಟಗೋಡಿ ವರ್ಗಾವಣೆ ಆಗಿದೆ. ಡಾ.ರಾಮ್​ ಎಲ್​. ಅರಸಿದ್ದಿ ಎಸ್ಪಿಯಾಗಿ ನೇಮಕವಾಗಿದ್ದಾರೆ. ಆದರೆ, ಅಧಿಕಾರ ಹಸ್ತಾಂತರ ಎರಡು ದಿನ ತಡವಾಯಿತು. ಈ ಅವಧಿಯಲ್ಲಿ ಯಶೋದಾ ಅವರನ್ನೇ ಮುಂದುವರಿಸುವಂತೆ ಸಿಎಂಗೆ ರಾಯರಡ್ಡಿ ಒತ್ತಡ ಹೇರಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ ರಾಯರಡ್ಡಿ, ಶಾಸಕರು ಮನವಿ ಮಾಡಿದ ಕಾರಣ ನಾನು ಸಿಎಂಗೆ ವಿನಂತಿಸಿಕೊಂಡಿದ್ದೆ. ಆದರೆ, ಆದೇಶ ಆಗಿದ್ದರಿಂದ ಬದಲಾವಣೆಆಗಲಿಲ್ಲ. ಯಾರು ಎಸ್ಪಿಯಾದರೆ ನನಗೇನು ಆಗಬೇಕಿಲ್ಲ ಎಂದು ಸಮರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net