ಕಂಗಾಲಾಗಿದ್ದ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿದ ಸಿಎಂ!

CM distributes books
Published on

ಬೆಂಗಳೂರು: ಮಹಾನಗರದ ವಿವಿಧಡೆ ಕಳೆದ ಕೆಲವು ದಿನಗಳ ಅವಧಿಯಲ್ಲಿ ಸುರಿದ ಮಳೆಯಿಂದಾಗಿ ಭಾರಿ ನಾಶನಷ್ಟಗಳು ಸಂಭವಿಸಿವೆ. ವಿಶೇಷವಾಗಿ ಹೊಸಕೆರೆಹಳ್ಳಿ ಭಾಗದಲ್ಲಿ ರಾಜಾಕಾಲುವೆ ನೀರು ಹೊರಗೆ ಹರಿದು ಮನೆಗಳು, ಅಂಗಡಿ ಮುಂಗಟ್ಟುಗಳು ಜಲಾವೃತವಾಗಿದ್ದವು.

ಇದೇ ವೇಳೆ, ಹೊಸಕೆರೆಹಳ್ಳಿಯ ಕೆಲವು ವಿದ್ಯಾರ್ಥಿಗಳ ನೋಟ್ ಬುಕ್ ಮತ್ತು ಓದುವ ಪುಸ್ತಕಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಈ ಬಗ್ಗೆ ಮಾಧ್ಯಮಗಳು ಸಮಾಜದ, ಸರ್ಕಾರದ ಗಮನಸೆಳೆದಿದ್ದವು. ಈ ವಿಷಯ ಗಮನಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆ ವಿದ್ಯಾರ್ಥಿಗಳನ್ನು ಮಂಗಳವಾರ ತಮ್ಮ‌ಮನೆಗೆ ಕರೆಯಿಸಿ ಅವರಿಗೆ ನೋಟ್ ಬುಕ್ ಗಳನ್ನು ವಿತರಿಸಿ ಪುಸ್ತಕಗಳನ್ನು ಕೊಂಡುಕೊಳ್ಳಲು ಆರ್ಥಿಕ ನೆರವನ್ನು ನೀಡಿದರು. ಚೆನ್ನಾಗಿ ಓದಿ ಸಾಧನೆ ಮಾಡಿ ಎಂದು ಸಿಎಂ ಮಕ್ಕಳಿಗೆ ಹಾರೈಸಿ ಕಳಿಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net