ಅರಕೇರಾ ತಾಲೂಕಿನಿಂದ ನಮ್ಮನ್ನು ಕೈಬಿಡಿ

Untitled design(24)
ಅರಕೇರಾ ತಾಲೂಕಿನಿಂದ ಕೈಬಿಡುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯಗೆ ಶಾಸಕಿ ಕರೆಮ್ಮ ಜಿ.ನಾಯಕ ನೇತೃತ್ವದಲ್ಲಿ ದೇವದುರ್ಗ ತಾಲೂಕಿನಲ್ಲಿ ಉಳಿವಿಗಾಗಿ ಹೋರಾಟ ಸಮಿತಿ ಮನವಿ ಸಲ್ಲಿಸಿತು. ಸಮಿತಿ ಅಧ್ಯಕ್ಷ ಗೋವಿಂದರಾಜ್ ನಾಯಕ, ಕಾರ್ಯದರ್ಶಿ ಶರಣಗೌಡ ಸುಂಕೇಶ್ವರಹಾಳ, ಸಿದ್ದನಗೌಡ ಮೂಡಲಗುಂಡ ಇತರರಿದ್ದರು.
Published on

ದೇವದುರ್ಗ: ಅಖಂಡ ದೇವದುರ್ಗ ಒಡೆದು ಅವೈಜ್ಞಾನಿಕವಾಗಿ ಅರಕೇರಾ ಹೊಸ ತಾಲೂಕು ರಚನೆ ಮಾಡಲಾಗಿದೆ. 8 ಗ್ರಾಪಂಗಳನ್ನು ಅರಕೇರಾದಿಂದ ಕೈಬಿಟ್ಟು ದೇವದುರ್ಗದಲ್ಲಿ ಮುಂದುವರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಾಸಕಿ ಕರೆಮ್ಮ ಜಿ.ನಾಯಕ ನೇತೃತ್ವದಲ್ಲಿ ದೇವದುರ್ಗ ತಾಲೂಕಿನಲ್ಲಿ ಉಳಿವಿಗಾಗಿ ಹೋರಾಟ ಸಮಿತಿ ಬುಧವಾರ ಮನವಿ ಸಲ್ಲಿಸಿತು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನರ ಅಭಿಪ್ರಾಯ ಹಾಗೂ ಸರಿಯಾದ ಮಾನದಂಡ ಅನುಸರಿಸದೆ ಅರಕೇರಾ ಹೊಸ ತಾಲೂಕು ರಚನೆ ಮಾಡಲಾಗಿದೆ. ಇದರಿಂದ ಸುಮಾರು 8 ಗ್ರಾಪಂ ವ್ಯಾಪ್ತಿಯ 60ಕ್ಕೂ ಹೆಚ್ಚು ಹಳ್ಳಿಗಳಿಗೆ ಸಮಸ್ಯೆಯಾಗಿದೆ. ಅರಕೇರಾ ಗ್ರಾಪಂಗಿಂತಲೂ ಕಡೆ ಆಗಿದ್ದು ಯಾವುದೇ ಅಗತ್ಯ ಸೌಲಭ್ಯ ಕಲ್ಪಿಸಿಲ್ಲ. ವಿವಿಧ ಇಲಾಖೆಗಳನ್ನು ಸ್ಥಳಾಂತರ ಮಾಡಿಲ್ಲ. ಅಲ್ಲದೆ ಅರಕೇರಾ ತಾಲೂಕು ಸೇರಿ 8 ಗ್ರಾಪಂಗಳ ಹಲವು ಹಳ್ಳಿಗಳಿಗೆ ತೀವ್ರ ಸಮಸ್ಯೆಯಾಗಿದೆ ಎಂದು ದೂರಿದರು.

ಕೂಡಲೇ ಜನರ ಅಭಿಪ್ರಾಯ ಪಡೆದು ರಾಮದುರ್ಗ, ಮಲದಕಲ್, ಹೊಸೂರು ಸಿದ್ದಾಪುರ, ಗಾಣಧಾಳ, ಪಲಕನಮರಡಿ, ಸೋಮನಮರಡಿ, ಮುಂಡರಗಿ ಗ್ರಾಪಂಗಳನ್ನು ಅರಕೇರಾ ತಾಲೂಕಿನಿಂದ ಕೈಬಿಟ್ಟು ದೇವದುರ್ಗ ತಾಲೂಕಿನಲ್ಲಿ ಮುಂದುವರಿಸಬೇಕು. 8 ಗ್ರಾಪಂಗಳು ಸಾಮಾನ್ಯ ಸಭೆಯಲ್ಲಿ ಪಾಸ್ ಮಾಡಿದ ಠರಾವುಗೆ ಕಾನೂನು ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಸಮಿತಿ ಅಧ್ಯಕ್ಷ ಗೋವಿಂದರಾಜ್ ನಾಯಕ, ಕಾರ್ಯದರ್ಶಿ ಶರಣಗೌಡ ಸುಂಕೇಶ್ವರಹಾಳ, ಪ್ರಮುಖರಾದ ಸಿದ್ದನಗೌಡ ಮೂಡಲಗುಂಡ, ರಂಗಣ್ಣ ಕೋಲ್ಕರ್, ಶರಣಗೌಡ ಕಮಲದಿನ್ನಿ, ಭೀಮಣ್ಣ ನಾಯಕ, ಶಿವುಪಾಟೀಲ್, ರಾಮನಗೌಡ, ದುರುಗಯ್ಯ, ಜಂಬಣ್ಣ, ಅಮರೇಶ, ಸಾಬ್‌ಗೌಡ, ಇಸಾಕ್ ಮೇಸ್ತ್ರಿ, ಶಿವರಾಜ ಮುಂಡರಗಿ, ಆದೆಪ್ಪ, ಶಿವಯ್ಯ, ವೆಂಕಟೇಶಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net