ಹೂವಿನಹಡಗಲಿ (ವಿಜಯನಗರ): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಸ್ವಪಕ್ಷದವರೇ ದೂರುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಆಗ್ರಹಿಸಿದರು. ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿ.ಆರ್.ಪಾಟೀಲ ಹಿರಿಯ ನಾಯಕರಿದ್ದು, ಸಮಾಜವಾದಿ ಹಿನ್ನೆಲೆಯಿಂದ ಬಂದವರು.
ರಾಜ್ಯದಲ್ಲಿನ ಭ್ರಷ್ಟಾಚಾರಗಳಲ್ಲಿ ಒಂದನ್ನು ಮಾತ್ರ ಉದಾಹರಣೆ ನೀಡಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಹೋದರೆ ಹಣ ಇಲ್ಲದೆ ಕೆಲಸವಾಗುತ್ತಿಲ್ಲ. ಅವರ ಮಾತು ಸತ್ಯ. ಯಾರಲ್ಲಿ ಹಣಯಿದೆಯೋ ಅವರಿಗೆ ಮನೆ ಸಿಗುತ್ತಿದೆ. ಲಂಚ ಎಷ್ಟು ನೀಡಬೇಕು ಎಂಬುದನ್ನು ಬೋರ್ಡ್ ಹಾಕಿ ಎಂದು ತಹಸಿಲ್ ಕಚೇರಿಗೆ ತೆರಳಿದಾಗ ಸ್ವತಃ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಇದು ಕಾಂಗ್ರೆಸ್ ಆಡಳಿತ ತೋರಿಸುತ್ತದೆ. ಅನೇಕ ವರ್ಷಗಳಿಂದ ಅಧಿಕಾರಿಗಳು ಒಂದೇ ಸ್ಥಳದಲ್ಲಿದ್ದು, ಅವರನ್ನೇಕೆ ಗರ್ಗ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಸೋನಿಯ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮುಸ್ಲಿಮರ ಪರ ಯಾತಕ್ಕೆ ಮಾತನಾಡುತ್ತಾರೆ ? ವೋಟ್ ಬ್ಯಾಂಕಿಗಾಗಿ ಮುಸ್ಲಿಮರಿಗೆ ಸೌಲಭ್ಯ ನೀಡಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ? ದೇಶದ ಭದ್ರತೆ ಬಗ್ಗೆ ಮಾತನಾಡುವ ಬದಲು ಮುಸ್ಲಿಂ ರಾಷ್ಟ್ರಗಳ ಪರವಾಗಿ ಮಾತನಾಡುತ್ತಾರೆ. ಕಾಂಗ್ರೆಸ್ ಎಂದಿಗೂ ಮುಸ್ಲಿಮರ ಓಲೈಕೆ ಮಾಡುತ್ತಲೇ ಬಂದಿದೆ. ಬಿಜೆಪಿಯಲ್ಲಿ ಸಣ್ಣ ಪುಟ್ಟ ಗೊಂದಲಗಳಿದ್ದು, ಸರಿಪಡಿಸಿಕೊಳ್ಳುತ್ತೇವೆ ಎಂದರು. ಜಗದೀಶ ಶೆಟ್ಟರ್ ಸಂಸದ