20ರಂದು ಸಿಎಂ ಕಪ್ ಕುಸ್ತಿ ಪಂದ್ಯಾವಳಿ

kusti
Published on

ಮೈಸೂರು: ರಾಜ್ಯ ಕುಸ್ತಿ ಸಂಘ, ಒಲಂಪಿಕ್ ಸಂಸ್ಥೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ‘ಸಿಎಂ ಕಪ್ ಮೈಸೂರು ಕುಸ್ತಿ ಚಾಂಪಿಯನ್‌ಷಿಪ್’ ಪಂದ್ಯಾವಳಿಯನ್ನು ಸೆ. 20ರಂದು ನಗರದ ಚಾಮಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಆಯ್ಕೆ ಪ್ರಕ್ರಿಯೆ ನಡೆಯಲಿದೆ.


ರಾಜ್ಯದ ಹಿರಿಯ ವಿಭಾಗದ ಪುರುಷರು ಹಾಗೂ ಮಹಿಳೆಯರ ಫ್ರೀ ಸ್ಟೈಲ್, ಗ್ರೀಕೋ ರೋಮನ್ ವಿಭಾಗಕ್ಕೆ ಆಯ್ಕೆ ಪ್ರಕ್ರಿಯೆ ಜರುಗಲಿದೆ. ರಾಜ್ಯದ ಕುಸ್ತಿಪಟುಗಳಿಗೆ ಮಾತ್ರ ಆದ್ಯತೆ ನೀಡಲಾಗುವುದು ಎಂದು ಪಂದ್ಯಾವಳಿಯ ನಿರ್ದೇಶಕ ಕೆ. ವಿನೋದ್‌ಕುಮಾರ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಯ್ಕೆಯಾದ ಎಲ್ಲ ಕುಸ್ತಿಪಟುಗಳಿಗೆ ಸಂಪೂರ್ಣ ಕ್ರೀಡಾ ಸಮವಸ್ತ್ರ, ಟಿಎ, ಡಿಎ ಹಾಗೂ ನಗದು ಬಹುಮಾನವನ್ನು ದಸರಾ ಕ್ರೀಡಾಕೂಟದಲ್ಲಿ ನೀಡಲಾಗುತ್ತದೆ. ಮಾಹಿತಿಗೆ ದೂ. 98457 27392 ಸಂಪರ್ಕಿಸಬಹುದು ಎಂದು ತಿಳಿಸಿದರು.


ಸಂಘದ ಅಧ್ಯಕ್ಷ ಇಟ್ಟಿಗೆಗೂಡು ಪೈ. ಚಂದ್ರಶೇಖರ್, ಮುಖಂಡರಾದ ಛೋಟಾ ರಫೀಕ್, ರಾಜೇಶ್, ಗಂಗಣ್ಣ, ಗಿರೀಶ್, ಜೂ. ಮಹದೇವಣ್ಣ ಕ್ಯಾತಮಾರನಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net