ಮುಖ್ಯಮಂತ್ರಿ ಕಾರಿಗೆ ಅಡ್ಡಬಂದವನ ವಿರುದ್ಧ ಎ್​ಐಆರ್​

Crime Logo
Published on

ರಾಣೆಬೆನ್ನೂರ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿಗೆ ಅಡ್ಡ ಬಂದು ತೊಂದರೆ ನೀಡಿದ ಅಪರಾಧದಡಿ ತಾಲೂಕಿನ ಕಾಕೋಳ ಗ್ರಾಮದ ವ್ಯಕ್ತಿಯೊಬ್ಬನ ವಿರುದ್ಧ ಇಲ್ಲಿಯ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ಕರಿಯಪ್ಪ ತಿರುಕಪ್ಪ ಕುದರಿಹಾಳ (40) ಎಂಬುವರ ವಿರುದ್ಧ ಪ್ರಕರಣ ದಾಖಲಾಗಿರುವುದು.
ಈತ ಆ. 30ರಂದು ದೇವರಗುಡ್ಡಕ್ಕೆ ಸಿಎಂ ಸಿದ್ದರಾಮಯ್ಯ ಬಂದಾಗ ಕಾಕೋಳ ಗ್ರಾಮದ ಬಳಿ ಶ್ರೀ ಮಾಲತೇಶ ಸ್ವಾಮಿ ದೇವರ ಕಮಾನ್​ ಹತ್ತಿರವಿರುವ ಸಂಗೊಳ್ಳಿ ರಾಯಣ್ಣ ಬೋರ್ಡ್​ಗೆ ಸಿಎಂ ಕಡೆಯಿಂದ ಹೂವಿನ ಹಾರ ಹಾಕಿಸುವ ಸಲುವಾಗಿ ವಾಹನ ತಡೆಯಲು ಮುಂದಾಗಿದ್ದಾನೆ. ಈ ಬಗ್ಗೆ ಅಧಿಕಾರಿಗಳು ತಿಳುವಳಿಕೆ ಹೇಳಿದರೂ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net