ಕಾಡು ಸಿದ್ದೇಶ್ವರ ಮಠದ ಸರ್ವತೋಮುಖ ಅಭಿವೃದ್ಧಿಗೆ ಸಿಎಂ ಯಡಿಯೂರಪ್ಪ ಭರವಸೆ

BSY at Tiptur Program 19 FEB 20
Published on

ತಿಪಟೂರು: ಕಾಡು ಸಿದ್ದೇಶ್ವರ ಮಠ ಅತ್ಯಂತ ಶಕ್ತಿಶಾಲಿ ಮಠವಾಗಿದೆ.ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಿರ್ವಹಿಸುತ್ತೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿ ಲಿಂಗೈಕ್ಯ ಶಿವಕುಮಾರ ಶ್ರೀಗಳನ್ನು ಸ್ಮರಿಸಿದರು.

ವಸತಿ ಸಚಿವ ವಿ ಸೋಮಣ್ಣ ಮಾತಾನಾಡಿ, ನಾನು ಸೇರಿದಂತೆ ಮುಖ್ಯಮಂತ್ರಿಯಾದಿಯಾಗಿ ಯಡಿಯೂರಪ್ಪ ಅವರು ಸೇರಿದಂತೆ ಚೆಲುವರಾಯಸ್ವಾಮಿ, ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲರೂ ಒಂದೇ ಮನೋಭಾವದಿಂದ ಮಠಕ್ಕೆ ಭಕ್ತರಾಗಿ ನಿರಂತರವಾಗಿ ನಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದೇವೆ. ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ ಎಲ್ಲ ಸಮಸ್ಯೆಗಳನ್ನು ನಿರ್ವಿಘ್ನವಾಗಿ ಬಗೆಹರಿಸುವಂತೆ ಪ್ರಾರ್ಥಿಸಿದ್ದೇವೆ ಎಂದರು.

ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಯಡಿಯೂರಪ್ಪ ಅವರು ಉತ್ತಮ ಆಡಳಿತ ನಡೆಸುತ್ತಾರೆ. ಅವರು ಒಬ್ಬ ಶ್ರಮ ಜೀವಿ. ರಾಜ್ಯದ ಅಭಿವೃದ್ಧಿಗೆ ನಿರಂತರವಾಗಿ ಹಗಲಿರಳು ಕೆಲಸ ಮಾಡುತ್ತಿದ್ದಾರೆ ಎಂದರು.

ಶಾಸಕ ಬಿ.ಸಿ. ನಾಗೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಎಂ ಡಿ ಲಕ್ಷ್ಮೀನಾರಾಯಣ, ಡಿಸಿ ಡಾ.ಕೆ.ರಾಕೇಶ್ ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net