

ಶಿವಮೊಗ್ಗ: ಶಿಕಾರಿಪುರ ತಾಲೂಕು ಮಲ್ಲೇನಹಳ್ಳಿಯ ವಿದ್ಯಾರ್ಥಿನಿ ತನುಜಾ ಕರೇಗೌಡ್ರ ಬುಧವಾರ ನೀಟ್ಗೆ ಹಾಜರಾಗಲು ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ವೈದ್ಯಕೀಯ ಶಿಕ್ಷಣ, ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ನೆರವಾದರು.
ಕೋವಿಡ್ ಕಾರಣಕ್ಕೆ ತನುಜಾ ನೀಟ್ ಬರೆಯಲು ಸಾಧ್ಯವಾಗಿರಲಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕರೊನಾ ಕಾರಣ ಅವಕಾಶ ವಂಚಿತರಿಗಾಗಿ ಮತ್ತೊಮ್ಮೆ ನೀಟ್ ಬರೆಯಲು ವ್ಯವಸ್ಥೆ ಮಾಡಿದರೂ ತಾಂತ್ರಿಕ ಕಾರಣಗಳಿಂದ 2ನೇ ಅವಕಾಶದಲ್ಲೂ ವಂಚಿತರಾಗುವ ಭೀತಿ ಎದುರಾಗಿತ್ತು. ಸಮಸ್ಯೆ ಬಗ್ಗೆ ತಿಳಿಯುತ್ತಿದ್ದಂತೆ ವಿದ್ಯಾರ್ಥಿನಿಗೆ ನೆರವಾಗುವಂತೆ ಸಚಿವರಿಗೆ ಸಿಎಂ ಸೂಚಿಸಿದರು. ಡಾ.ಕೆ.ಸುಧಾಕರ್ ಎನ್ಟಿಎ ತಾಂತ್ರಿಕ ನಿರ್ದೇಶಕರೊಂದಿಗೆ ಚರ್ಚೆ ಮಾಡಿ ಬೆಂಗಳೂರಿನ ಬಸವನಗುಡಿ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರು.