ದೆಹಲಿಯಿಂದ ವಾಪಸ್ಸಾದ ಸಿಎಂ, ಆಕಾಂಕ್ಷಿಗಳಲ್ಲಿ ಹೆಚ್ಚಿದ ಕುತೂಹಲ

BSY JPG
Published on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 3 ದಿನಗಳ ದೆಹಲಿ ಪ್ರವಾಸ ಮುಗಿಸಿ, ವಿಶೇಷ ವಿಮಾನದಲ್ಲಿ ಶನಿವಾರ ಮಧ್ಯಾಹ್ನ ಬೆಂಗಳೂರಿಗೆ ಹಿಂತಿರುಗಿದ್ದು, ನೇರ ಅಧಿಕೃತ ಕಾವೇರಿ ನಿವಾಸಕ್ಕೆ ತೆರಳಿದ್ದಾರೆ.

ಅಧಿವೇಶನಕ್ಕೆ ಮುಂಚೆ ಸಚಿವ ಸಂಪುಟ ವಿಸ್ತರಣೆಯ ಅಪೇಕ್ಷೆಯನ್ನು ಸಿಎಂ ಪದೇ ಪದೆ ಪುನರುಚ್ಚರಿಸಿದ್ದು, ಆಕಾಂಕ್ಷಿಗಳ ಕುತೂಹಲ ಹೆಚ್ಚಿಸಿದೆ. ಸಂಜೆಯವೇಳೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಅಧಿವೇಶನಕ್ಕೆ ಮುನ್ನವೇ ಸಚಿವ ಸಂಪುಟ ವಿಸ್ತರಣೆ ಅನುಮಾನ ವ್ಯಕ್ತವಾಗುತ್ತಿದೆ. ಹಾಗೊಂದು ವರಿಷ್ಠರಿಗೆ ಇಚ್ಚೆಯಿದ್ದರೆ ಸಿಎಂ ಕೈಗೆ ಪಟ್ಟಿ ಕಳುಹಿಸುತ್ತಿದ್ದರು. ನಂತರ ತಿಳಿಸುವುದಾಗಿ ಹೇಳಿ ಕಳುಹಿಸುತ್ತಿದ್ದಿಲ್ಲ ಎಂದು ಪಕ್ಷದ ಮೂಲಗಳು ತರ್ಕಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net