ಸಿಎಂ ಬೊಮ್ಮಾಯಿ ಪ್ರವಾಸ ಮಾ.9, 10ರಂದು

_DSC5997
Published on

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾ.9 ಹಾಗೂ 10ರಂದು ಜಿಲ್ಲೆಯ ಪ್ರವಾಸ ಕೈಗೊಂಡಿದ್ದು, ಹಾವೇರಿ ಮತ್ತು ಶಿಗ್ಗಾಂವಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಮಾ.9ರಂದು ಸಂಜೆ 7.45ಕ್ಕೆ ಶಿಗ್ಗಾಂವಿಯ ವಿರಕ್ತ ಮಠದಲ್ಲಿ ಆಯೋಜಿಸಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಮಾ.10ರಂದು ಬೆಳಗ್ಗೆ 10.30ಕ್ಕೆ ಹಾವೇರಿ ತಾಲೂಕಿನ ಜಂಗಮಕೊಪ್ಪ ಗ್ರಾಮದಲ್ಲಿ ಹಾವೇರಿ ಹಾಲು ಒಕ್ಕೂಟ (ಹಾವೆಮುಲ್)ದ ವತಿಯಿಂದ ಆಯೋಜಿಸಿರುವ ನೂತನ ಯುಎಚ್‌ಟಿ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಾವೇರಿ ನಗರದ ಮುನ್ಸಿಪಲ್ ಮೈದಾನದಲ್ಲಿ ಮಧ್ಯಾಹ್ನ 12 ಗಂಟೆಗೆ ಆಯೋಜಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಶಿಗ್ಗಾಂವಿಯ ಸಂತೆ ಮೈದಾನದಲ್ಲಿ ಮಧ್ಯಾಹ್ನ 1.30ಕ್ಕೆ ಬಿಜೆಪಿಯಿಂದ ಆಯೋಜಿಸಿರುವ ಮಹಿಳಾ ಸಮಾವೇಶದಲ್ಲಿ ಭಾವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಶಿಗ್ಗಾಂವಿಯ ಹನುಮಂತಗೌಡ್ರ ಪಾಟೀಲ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಕಿರಾಣಿ ವ್ಯಾಪಾರಸ್ಥರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net