ಸಮಗ್ರ ಕೃಷಿ ನೀತಿಗೆ ಒತ್ತು: ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ‌ ಹೇಳಿಕೆ

CM Bommai
Published on

ಬೆಂಗಳೂರು: ರಾಜ್ಯದಲ್ಲಿ ರೈತರ ಜೀವನಮಟ್ಟ ಸುಧಾರಣೆ ಹಾಗೂ ಆರ್ಥಿಕವಾಗಿ ಬಲವರ್ಧನೆಗೆ ಸಮಗ್ರ ಕೃಷಿಗೆ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾನುವಾರ ಆಯೋಜಿಸಿದ್ದ ' ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಕಾರ್ಯಕ್ರಮ' ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕೆ ಅನ್ನ ನೀಡುವ ಅನ್ನದಾತರ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹಣದ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ಘೋಷಿಸಿ, ಅಲ್ಪಾವಧಿಯಲ್ಲಿ ಅನುಷ್ಠಾನಕ್ಕೆ ತಂದಿರುವುದು ಸಾರ್ಥಕತೆಯ ಸಮಾಧಾನ ತಂದಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಸ್ಫೂರ್ತಿ, ಹಿರಿಯ ನಾಯಕ ಬಿ‌ಎಸ್.ಯಡಿಯೂರಪ್ಪ ಮಾರ್ಗದರ್ಶನ ಮಹತ್ವದ್ದಾಗಿದೆ ಎಂದರು.

ಈ ಕಾರ್ಯಕ್ರಮದಡಿ 17 ಲಕ್ಷ ರೈತರ‌ ಮಕ್ಕಳಿಗೆ ಶಿಷ್ಯ ವೇತನ ರೂಪದಲ್ಲಿ ಒಟ್ಟು 1000 ಕೋಟಿ ರೂ ವಿನಿಯೋಗಿಸಿದ್ದು, ಇದು ವೆಚ್ಚವಲ್ಲ ಬಂಡವಾಳ ಹೂಡಿಕೆ ಎಂದು ಬೊಮ್ಮಾಯಿ‌ ಸಮರ್ಥಿಸಿಕೊಂಡರು.

ರಾಜಕಾರಣಿ ಮುಂದಿನ ಚುನಾವಣೆ ಬಗ್ಗೆ ಯೋಚಿಸಿ ಕಾರ್ಯಕ್ರಮ ರೂಪಿಸಿದರೆ, ಮುತ್ಸದ್ದಿ‌ ಮುಂದಿನ ಜನಾಂಗದ ಬಗ್ಗೆ ಚಿಂತನೆ ನಡೆಸಿ ಯೋಜನೆ ಅನುಷ್ಠಾನಕ್ಕೆ ತರುತ್ತಿದ್ದು, ಮೋದಿ ಮುತ್ಸದ್ದಿತನ ಹಲವು ಯೋಜನೆಗಳು ಹಾಗೂ ವೇಗವಾಗಿ ಜಾರಿಯಲ್ಲಿ ಎದ್ಸು‌ ಕಾಣುತ್ತದೆ ಎಂದು ಬಸವರಾಜ ಬೊಮ್ಮಾಯಿ‌ ಶ್ಲಾಘಿಸಿದರು.

ಕೇಂದ್ರ ಕೃಷಿ, ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net