

ಬೆಂಗಳೂರು: ಪ್ರಮುಖ ರಾಜಕೀಯ ತೀರ್ವನಗಳನ್ನು ಬಯಸಿ ದೆಹಲಿಗೆ ತೆರಳಿದ್ದ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಪ್ರಸ್ತಾವಿತ ಯೋಜನೆಗಳ ಅನುಷ್ಠಾನಕ್ಕೆ ಸೀಮಿತವಾಗಿ ವರಿಷ್ಠರಿಂದ ಹೊಸ ಟಾಸ್ಕ್ ಪಡೆದು ಹಿಂದಿರುಗಿದ್ದಾರೆ. ಇದರಿಂದಾಗಿ ಬಹು ರ್ಚಚಿತ ಸಂಪುಟ ವಿಸ್ತರಣೆ ನಿರ್ಧಾರ ಕುತೂಹಲ ಏ.16 ಹಾಗೂ 17ರಂದು ಹೊಸಪೇಟೆಯಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿಗೆ ಮುಂದೂಡಿಕೆಯಾಗಿದೆ. ಸಂಪುಟ ವಿಚಾರವಾಗಿ ಸಿಎಂ ಬರಿಗೈಲಿ ಹಿಂದಿರುಗಿರುವ ಪರಿಣಾಮ ಸಚಿವಾಕಾಂಕ್ಷಿಗಳು ನಿರಾಸೆಯ ಮಡುವಿಗೆ ಬಿದ್ದಿದ್ದಾರೆ.
ನಡ್ಡಾ ಸೂಚನೆ: ಬಿಜೆಪಿ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗಿ ಯಾದ ಸಂದರ್ಭ ಬಳಸಿಕೊಂಡು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಳಿ ಸಿಎಂ ಬೊಮ್ಮಾಯಿ ಸಚಿವ ಸಂಪುಟ ವಿಚಾರ ಪ್ರಸ್ತಾಪಿಸಿದ್ದಾರೆ. ಆದರೆ ರಾಜ್ಯಕ್ಕೆ ಬಂದಾಗ ಈ ವಿಷಯವಾಗಿ ಇನ್ನಷ್ಟು ರ್ಚಚಿಸೋಣ ಎಂದು ನಡ್ಡಾ ಸಮಾಧಾನದ ಮಾತು ಹೇಳಿ ಕಳುಹಿಸಿದ್ದಾರೆ. ಅಮಿತ್ ಷಾ ಅವರನ್ನು ಭೇಟಿ ಮಾಡುವ ಸಿಎಂ ಪ್ರಯತ್ನ ಈಡೇರಿಲ್ಲ. ದೆಹಲಿ ನಾಯಕರ ಮನದಲ್ಲೇನಿದೆ ಎಂಬ ಸುಳಿವು ಸಿಗದೆ ದೆಹಲಿ ಪ್ರವಾಸ ನಿಗದಿಯಾಗಿದ್ದರಿಂದಲೇ ಸಿಎಂ ಬರಿಗೈಲಿ ಮರಳುವಂತಾಯಿತು ಎಂದು ಮೂಲಗಳು ವ್ಯಾಖ್ಯಾನಿಸಿವೆ.
ವರಿಷ್ಠರ ಚಿಂತನೆ: ಸಚಿವ ಸಂಪುಟ, ನಿಗಮ-ಮಂಡಳಿ, ಪಕ್ಷದ ರಾಜ್ಯ ಸಮಿತಿಯಲ್ಲೂ ಬದಲಾವಣೆ ಮಾಡುವುದು ದೆಹಲಿ ನಾಯಕರ ಚಿಂತನೆಯಾಗಿದೆ. ಅಲ್ಪಸ್ವಲ್ಪ ಮಾರ್ಪಾಟಿನಿಂದ ಅನುಕೂಲಕ್ಕಿಂತ ಅನನುಕೂಲವೇ ಜಾಸ್ತಿ. ಇದರಿಂದ ಮುಂಬರುವ ವಿಧಾನಸಭೆ ಚುನಾವಣೆ ಮೇಲೂ ಅಡ್ಡಪರಿಣಾಮಬೀರಲಿದೆ ಎಂದು ಭಾವಿಸಿದ್ದಾರೆ. ಪದೇಪದೆ ಸಚಿವ ಪದವಿ ಅನುಭವಿಸಿದ ಕೆಲವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸುವುದು. ಜಾತಿ, ಜಿಲ್ಲೆ, ಪ್ರದೇಶದ ಪ್ರಾತಿನಿಧ್ಯ ನೀಡಿ ಚುನಾವಣೆಗೆ ಸಚಿವರ ತಂಡ ಸಜ್ಜುಗೊಳಿಸಲು ಯೋಚಿಸಿದ್ದಾರೆ. ನಿಗಮ-ಮಂಡಳಿಗಳನ್ನು ಪುನರ್ ರಚಿಸುವುದು ಅಂತಿಮವಾಗಿದೆ. ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ, ಹೊಸ ಹುದ್ದೆಗಳ ಸೃಜನೆ ಹಾಗೂ ಜಾತಿವಾರು ಆದ್ಯತೆ ಲೆಕ್ಕಾಚಾರಕ್ಕೆ ಮಣೆ ಹಾಕುವ ಸಾಧ್ಯತೆಗಳಿವೆ.
| ಬಸವರಾಜ ಬೊಮ್ಮಾಯಿಮುಖ್ಯಮಂತ್ರಿವರಿಷ್ಠರ ಸೂಚನೆ ಏನು?: ರಾಜ್ಯದ ಅಭಿವೃದ್ಧಿ, ಬಜೆಟ್ ಪ್ರಸ್ತಾಪಿತ ಯೋಜನೆಗಳ ಅನುಷ್ಠಾನಕ್ಕೆ ಸೀಮಿತವಾಗಿ ವರಿಷ್ಠರು ಬೊಮ್ಮಾಯಿಗೆ ಟಾಸ್ಕ್ ನೀಡಿದ್ದು, ಅದೇ ವಿಚಾರವನ್ನು ನಡ್ಡಾ ಪ್ರಸ್ತಾಪಿಸಿದ್ದಾರೆ. ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಂದ ಕೆಲಸ ತೆಗೆದುಕೊಂಡು, ಆಡಳಿತಕ್ಕೆ ವೇಗ ನೀಡಿ, ಬಜೆಟ್ನಲ್ಲಿ ಪ್ರಸ್ತಾಪಿಸಿದ ಕಾರ್ಯಕ್ರಮಗಳಿಗೆ ಕಾಲಮಿತಿ ನಿಗದಿಪಡಿಸಿ ಜಾರಿಗೊಳಿಸಲು ಸೂಚಿಸಿದ್ದಾರೆ. ಜನಪ್ರಿಯ ಕಾರ್ಯಕ್ರಮಗಳು, ಹೊಸ ಯೋಜನೆಗಳ ಲಾಭವನ್ನು ಜನರಿಗೆ ಸಕಾಲಕ್ಕೆ ತಲುಪಿಸುವ ಜತೆಗೆ ಸಚಿವರು, ಶಾಸಕರು, ಪಕ್ಷದ ನಡುವೆ ಸಮನ್ವಯದ ಕಡೆಗೂ ನಡ್ಡಾ ಗಮನಸೆಳೆದರು ಎಂದು ಮೂಲಗಳು ಮಾಹಿತಿ ನೀಡಿವೆ.
ಸಿಎಂ ಬೊಮ್ಮಾಯಿಗೆ ಎಲೆಕ್ಷನ್ ಟಾಸ್ಕ್: ಷಾ-ಶೆಟ್ಟರ್ ಚರ್ಚೆ: ಮಾಜಿ ಸಿಎಂ ಜಗದೀಶ ಶೆಟ್ಟರ್ ಗುರುವಾರ ಅಮಿತ್ ಷಾ ಅವರನ್ನು ಭೇಟಿಯಾಗಿ ರಾಜ್ಯದ ರಾಜಕೀಯ ಬೆಳವಣಿಗೆ, ಸರ್ಕಾರದ ಕಾರ್ಯವೈಖರಿ ಕುರಿತು ಮಾತುಕತೆ ನಡೆಸಿದ್ದಾರೆನ್ನಲಾಗಿದೆ. ಸಿಎಂ ಬೊಮ್ಮಾಯಿಗಿಂತ ಒಂದು ದಿನ ಮೊದಲೇ ಶೆಟ್ಟರ್ ದೆಹಲಿಗೆ ತೆರಳಿದ್ದು, ವರಿಷ್ಠರ ಬುಲಾವ್ ಮೇರೆಗೆ ಈ ಭೇಟಿ ನಿಗದಿಯಾಗಿತ್ತು ಎಂದು ಮೂಲಗಳು ತಿಳಿಸಿವೆ.
ಏ.16, 17ಕ್ಕೆ ಕಾರ್ಯಕಾರಿಣಿ: ಸರ್ಕಾರ, ಪಕ್ಷದ ಮಟ್ಟದಲ್ಲಿ ಮಹತ್ತರ ಬದಲಾವಣೆ ಸುಳಿವು ಸಿಕ್ಕಿರುವ ಕಾರಣ ಹೊಸಪೇಟೆಯಲ್ಲಿ ಏ.16, 17ರಂದು ನಡೆಯಲಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ಮಹತ್ವ ಪಡೆದುಕೊಂಡಿದೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜತೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಾಲ್ಗೊಳ್ಳಲು ನಿರ್ಧರಿಸಿದ್ದು, ಪ್ರಮುಖ ತೀರ್ವನಗಳಿಗೆ ರೂಪರೇಷೆ ಸಿದ್ಧವಾಗಲಿದೆ ಎಂದು ರ್ತಸಲಾಗುತ್ತಿದೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯುವ ಜತೆಗೆ ಸಚಿವ ಸಂಪುಟ, ಪಕ್ಷದ ರಾಜ್ಯ ಸಮಿತಿಯಲ್ಲೂ ಪ್ರಮುಖ ಬದಲಾವಣೆ ಸಂದೇಶ ರವಾನೆಯಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿಗೆ ಏನನ್ನೂ ಹೇಳದೆ ಕಳುಹಿಸಿದ್ದಾರೆ. ಕಾರ್ಯಕಾರಿಣಿ ಸಭೆ ಬಳಿಕ ದೆಹಲಿಮಟ್ಟದಲ್ಲಿ ಮತ್ತೊಂದು ಸುತ್ತಿನ ಚರ್ಚೆಯ ನಂತರ ಬದಲಾವಣೆ ಸ್ವರೂಪ ಸ್ಪಷ್ಟವಾಗಲಿದೆ ಎಂದು ಮೂಲಗಳು ತಿಳಿಸಿವೆ.
ವಿಜಯೇಂದ್ರಗೆ ಸ್ಥಾನ?: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರನೆಂಬ ಕಾರಣಕ್ಕಷ್ಟೇ ಅಲ್ಲ, ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಸಂಘಟನಾಶಕ್ತಿ ಬೆಳೆಸಿಕೊಂಡಿದ್ದು, ಸೂಕ್ತ ಸ್ಥಾನಮಾನ ಕಲ್ಪಿಸುವ ಮೂಲಕ ಯಡಿಯೂರಪ್ಪ ಅವರನ್ನು ತೃಪ್ತಿ ಪಡಿಸಲು ವರಿಷ್ಠರು ಯೋಚಿಸಿದ್ದಾರೆಂಬ ಸುದ್ದಿಗಳು ಬಿಜೆಪಿಯಲ್ಲಿ ಹರಿದಾಡುತ್ತಿವೆ. ಸಚಿವ ಸಂಪುಟದಲ್ಲಿ ಅವಕಾಶ ನೀಡಲಿ ದ್ದಾರೆಯೋ ಅಥವಾ ಪಕ್ಷದಲ್ಲಿ ಈಗಿರುವ ಹುದ್ದೆಯಲ್ಲೇ ಬಡ್ತಿ ನೀಡಲಿದ್ದಾರೆಯೋ ಎನ್ನುವುದು ಸ್ಪಷ್ಟವಾಗಿಲ್ಲ.
| ಅರವಿಂದ ಬೆಲ್ಲದಶಾಸಕ