ಕಾಂಗ್ರೆಸ್ ನವರು ಗೋಮುಖ ವ್ಯಾಘ್ರ, ಸಿಎಂ ಆಕ್ರೋಶ

Screenshot_2023-03-28-18-56-36-62.jpg
Published on

ಬೆಳಗಾವಿ: ಕಾಂಗ್ರೆಸ್ ನವರು ಜಾತಿ, ಧರ್ಮ, ವರ್ಗದ ಹೆಸರಿನಲ್ಲಿ ಬಹಳ ದಿನ ಆಡಳಿತ ಮಾಡಿದರು. ಬಿಜೆಪಿಯ ಸಮಾಜಿಕ‌ ನ್ಯಾಯ ತಳಹದಿಯ ಆಡಳಿತವನ್ನು ಅವರಿಗೆ ಸಹಿಸಿಕೊಳ್ಳಲಾಗಲಿಲ್ಲ. ಬೊಮ್ಮಾಯಿ ಅವನೊಬ್ಬ ನಾಯಿ ಅಂದರು. ಹೌದು ನಾನು ಕರ್ನಾಟಕದ 7 ಕೋಟಿ ಜನರ ನಿಯತ್ತಿನ‌ ನಾಯಿ. ನನಗೆ ಜನರ ಹಿತರಕ್ಷಣೆ ಮುಖ್ಯ ಎಂದು ಸಿಎಂ ಬಸವರಾಜ ‌ಬೊಮ್ಮಾಯಿ ಕಾಂಗ್ರೆಸ್ ಗೆ ಚಾಟಿ ಬೀಸಿದರು.
ಗೋಕಾಕ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಗೋಕಾಕ, ಅರಬಾವಿ, ಅಥಣಿ ತಾಲೂಕು ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ನೆರವೇರಿಸಿ ಅವರು‌ ಮಾತನಾಡಿದರು. ಬಸವರಾಜ ಬೊಮ್ಮಾಯಿಗೆ ಶಕುನಿ, ಅವನೊಬ್ಬ ನಾಯಿ ಅನ್ನುವವರು ನಿಜವಾಗಿ ಗೋಮುಖ ವ್ಯಾಘ್ರಗಳು ಎಂದು‌ ಕುಟುಕಿದರು. ಕಾಂಗ್ರೆಸ್ ಸರ್ಕಾರದ 60 ಭ್ರಷ್ಟಾಚಾರದ ಪ್ರಕರಣಗಳನ್ನು ನಾವು ಲೋಕಾಯುಕ್ತಕ್ಕೆ ನೀಡುತ್ತೆವೆ.
ತನಿಖೆ ಆಗಲಿ. ಎಲ್ಲವನ್ನೂ ಸಹ ನಾವು ಸಾಕ್ಷೀ ಸಮೇತ ಲೋಕಾಯುಕ್ತಕ್ಕೆ ನೀಡುತ್ತೇವೆ ಎಂದರು.
ನಮ್ಮದು ದೇಶಭಕ್ತರ ಪಾರ್ಟಿ. ಅವರದ್ದು ದೇಶ ದ್ರೋಹಿಗಳಿಗೆ ಸಪೋರ್ಟ್ ಮಾಡುವ ಪಾರ್ಟಿ.
ಸಾಮಾಜಿಕ ನ್ಯಾಯ ಅಂತಾ ಅವರು ಭಾಷಣ ಹೊಡೆದಿದ್ದೆ ಹೊಡೆದಿದ್ದು. ಎಲ್ಲಿದೆ ಸಾಮಾಜಿಕ ನ್ಯಾಯ? ಸಾಮಾಜಿಕ ನ್ಯಾಯ ಒದಗಿಸಿದ್ದು ನಮ್ಮ ಸರ್ಕಾರ.
ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಟ್ಟರೆ ಅದಕ್ಕೂ ಕೂಡ ಸಂಶಯ ಪಡುತ್ತಾರೆ. ಇನ್ನೂ ಮುಂದೆ ಕಾಂಗ್ರೆಸ್ ನ ಆಟ ನಡೆಯುವುದಿಲ್ಲ ಎಂದರು.
ಬಂಜಾರ ಬಂಧುಗಳಿಗೆ ಮನೆ ಇರಲಿಲ್ಲ. ಊರು ಕಂದಾಯ ಗ್ರಾಮ ಆಗಿರಲಿಲ್ಲ.
ನಾನು ಬಂದ ಮೇಲೆ ಕಾನೂನು ತಿದ್ದುಪಡಿ ಮಾಡಿ ಹಕ್ಕು ಪತ್ರ ಕೊಡುವ ಕೆಲಸ ಮಾಡಿದ್ದೇವೆ.
ನಮ್ಮ ಕೆಲಸಗಳಲ್ಲಿ ಬದಲಾವಣೆ ತರಬೇಕು ಮಾತುಗಳಲ್ಲಿ ಅಲ್ಲಾ.
ನೀವು ಅಧಿಕಾರದಲ್ಲಿದ್ದಾಗ ಎನೂ ಮಾಡಿದಿರಿ?
ನಾವು ಮಾಡಿದ ಕೆಲಸಕ್ಕೆ ರಾಜ್ಯದಲ್ಲಿ ಕ್ಷೋಭೆ ಉಂಟು ಮಾಡುತ್ತೀರಿ. ಜನಾಂಗ ಜನಾಂಗದ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತೀರಿ.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಶಕುನಿಯ ಕೆಲಸವನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು. ಕಾಂಗ್ರೇಸ್ ಹೇಳುದು ಯಾವಾಗಲೂ ಸುಳ್ಳಿನ ಕಂತೆ. ಮತ್ತೊಮ್ಮೆ ನಮಗೆ ಆಶೀರ್ವಾದ ಮಾಡಿ. ಚುನಾವಣೆಯಲ್ಲಿ ಬೆಳಗಾವಿ‌ ಜಿಲ್ಲೆಯ ನಿರ್ಧಾರ, ರಾಜ್ಯದ ನಿರ್ಧಾರ.‌ ಹೀಗಾಗಿ 18ರಲ್ಲಿ 18 ಕ್ಷೇತ್ರವನ್ನು ಗೆಲ್ಲಿಸುತ್ತೀರಿ ಎಂಬ ನಂಬಿಕೆ ಇದೆ.‌ ಇದಕ್ಕೆ ಗೋಕಾನನಲ್ಲಿ‌‌ ಪಾಲ್ಗೊಂಡಿರುವ ಜನಸಾಗರವೇ ಸಾಕ್ಷಿಯಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net