

ಸಿಎಂ ಬದಲಾವಣೆ ಕೇವಲ ಮಾಧ್ಯಮಗಳಲ್ಲಿ ಅಷ್ಚೆ ಚರ್ಚೆ : ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿಕೆ
ಕಲಬುರಗಿ : ಸರ್ಕಾರದಲ್ಲಿ ಗೊಂದಲ ಇಲ್ಲ.. ಪವರ್ ಶೇರಿಂಗ್ ಬಗ್ಗೆ ಚರ್ಚೆಯೇ ಇಲ್ಲ. ಸಿಎಂ ಬದಲಾವಣೆ, ಕೆಪಿಸಿಸಿ ಬದಲಾವಣೆ ಕೇವಲ ಮಾಧ್ಯಮಗಳಲ್ಲಿ ಚರ್ಚೆಯಾಗ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಹೇಳಿದರು.
ನಗರದಲ್ಲಿ ಇಂದು ಪತ್ರಕರ್ತರ ಜತೆಗೆ ಮಾತನಾಡಿ, ಯಾರಾದರೂ ಸಚಿವರು, ಶಾಸಕರು ಸಿಎಂ, ಕೆಪಿಸಿಸಿ ಬದಲಾವಣೆ ಬಗ್ಗೆ ಸುದ್ದಿಗೋಷ್ಟಿ ಮಾಡಿದ್ದಾರೇನು? ಏನಾದರೂ ಹೇಳಿದ್ದಾರೇನು ಎಂದು ಪ್ರಶ್ನಿಸಿದರು.
ಯಾರೋ ಬರ್ತಾರೆ.. ಅವರಿಗೆ ಮಾಧ್ಯಮದವರು ಲೀಡಿಂಗ್ ಪ್ರಶ್ನೆ ಕೇಳುತ್ತಿರಿ. ಆಗ ಅವರು ಅದಕ್ಕೆ ರಿಯ್ಯಾಕ್ಟ್ ಮಾಡ್ತಿರಬಹುದು ಅಷ್ಡೆ ಎಂದರು.
ನಮ್ಮ ಸರ್ಕಾರ ಸುರಳಿತವಾಗಿ ನಡೆಯುತ್ತಿದೆ.. ಸುಭದ್ರವಾಗಿದೆ
ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಪರ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಬ್ಯಾಟಿಂಗ್ ಮಾಡಿದರು.
ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ರಿಯ್ಯಾಕ್ಟ್ ಮಾಡದಂತೆ ಹೈಕಮಾಂಡ್ ವಾರ್ನ್ ಮಾಡಿದೆ. ನಾವೆಲ್ಲ ಒಟ್ಟಾಗಿ ಇದೇವೆ.. ಜನರಪರ ಆಡಳಿತ ನೀಡ್ತಿದ್ದೇವೆ ಎಂದು ತಿಳಿಸಿದರು.
ಬಾಕ್ಸ್
*ಉದಯಗಿರಿ ಗಲಭೆ ಬಗ್ಗೆ ಮಾತನಾಡಲು ಸಚಿವ ಡಾ ಶರಣಪ್ರಕಾಶ್ ಪಾಟೀಲ್ ನಕಾರ* ಗಲಭೆ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.