ವಿದ್ಯಾರ್ಥಿಗಳನ್ನು ಸದೃಢರನ್ನಾಗಿಸುವ ಹೊಣೆ ಶಿಕ್ಷಕರ ಮೇಲಿದೆ

IMG-20230718-WA0045.jpg
Published on

ಬೆಳಗಾವಿ : ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುವದರ ಜತೆಗೆ ಸದೃಢ ದೇಹ ಹಾಗೂ ಮನಸ್ಸನ್ನು ನಿರ್ಮಿಸಿ ಆರೋಗ್ಯ ಕಾಪಾಡುವ ಜವಾಬ್ದಾರಿ ಪಾಲಕರು ಮತ್ತು ಶಿಕ್ಷಕರ ಮೇಲಿದೆ ಎಂದು ಬೆಳಗಾವಿ ಗ್ರಾಮೀಣ ವಲಯದ ಬಿಆರ್‌ಪಿ ಶಂಕರ ತಾರಾಪೂರ ಹೇಳಿದರು.

ಬೆಳಗಾವಿ ತಾಲೂಕಿನ ಜಾಫರವಾಡಿ ಗ್ರಾಮದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ ಕಡೂಲಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಮಂಗಳವಾರ ಉದ್ಘಾಟಿಸಿ, ಮಾತನಾಡಿದ ಅವರು, ಮಕ್ಕಳು ಮೊಬೈಲ್ ಆಟಗಳನ್ನು ಆಡುವುದನ್ನು ಬಿಟ್ಟು ಶಾಲೆಯ ಮೈದಾನಗಳಲ್ಲಿ  ಆಟ ಆಡುವಂತೆ ಹುರಿದುಂಬಿಸಬೇಕು ಎಂದು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷೆ ಮೋಹಿನಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಪಿ.ಎಂ.ಹಾಲಣ್ಣವರ, ಸಿಆರ್‌ಪಿ ಸಂದೀಪ ಕೃಷ್ಣೋಜಿ,
ರಮೇಶ ಸನದಿ, ಜಯಶ್ರೀ ಮುತಗೇಕರ, ಮಹಾದೇವಿ ಜಾಧವ,  ಮಾಲತಿ ಕಾಂಬಳೆ, ಉಷಾ ಕೌಲಗೆ, ರಮೇಶ ಅಲಗೋಡಕರ ಮಹಾದೇವಿ ಹೊಟ್ಟೆಣ್ಣವರ, ಎಸ್.ಪಿ.ಸುತಾರ, ಜಾವೇದ ಜಮಾದಾರ, ಎಸ್.ಎಸ್.ಪಾಟೀಲ, ರಾಜು ಸುತಾರ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net