

ವಿಜಯಪುರ: ಕೊಲ್ಹಾರ ತಾಲೂಕಿನ ಕೂಡಗಿಯ ಜ್ಞಾನ ಭಾರತಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಅಮೋಘ ಸಾಧನೆ ಮೆರೆದಿದ್ದಾರೆ.
ಗೊಳಸಂಗಿಯಲ್ಲಿ ಈಚೆಗೆ ನಡೆದ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ. ಹೀಗಾಗಿ ಶಾಲೆ ಆಡಳಿತ ಮಂಡಳಿ ಗುರುವಾರ ವಿದ್ಯಾರ್ಥಿಗಳಿಗೆ ಗೌರವಿಸಿ, ಅವರಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿತು.
ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ವಿಜಯಲಕ್ಷ್ಮಿ ತಳೆವಾಡ (ಪ್ರಥಮ), ರಂಗೋಲಿ ಸ್ಪರ್ಧೆಯಲ್ಲಿ ಸ್ಫೂರ್ತಿ ಹಂದಿಗನೂರ (ಪ್ರಥಮ), ಭಕ್ತಿಗೀತೆ ಸ್ಪರ್ಧೆಯಲ್ಲಿ ಆರಾಧ್ಯ ಸಾಗರ (ಪ್ರಥಮ), ಕಥೆ ಹೇಳುವ ಸ್ಪರ್ಧೆಯಲ್ಲಿ ಸನ್ನಿಧಿ ಮಾದರ(ಪ್ರಥಮ), ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ಅಮೂಲ್ಯ ವಸ್ತ್ರದ (ದ್ವಿತೀಯ), ಕಥೆ ಹೇಳುವ ಸ್ಪರ್ಧೆಯಲ್ಲಿ ಆರಾಧ್ಯ ಸಾಗರ (ತೃತೀಯ) ಸ್ಥಾನ ಪಡೆದಿದ್ದಾರೆ.
ಕ್ವಿಜ್‌ನಲ್ಲಿ ಸಂಗೀತಾ ಅಗಸರ ಮತ್ತು ಸ್ಫೂರ್ತಿ ಹಂದಿಗನೂರ, ಜಾನಪದ ಗೀತೆ ಸ್ಪರ್ಧೆಯಲ್ಲಿ ರೇಖಾ ಮಂಕಣಿ, ಆಶುಭಾಷಣದಲ್ಲಿ ಸಂಗೀತಾ ಅಗಸರ, ಮಿಮಿಕ್ರಿಯಲ್ಲಿ ಬಿಲಾಲ್ ಕೊರಬು, ಜಾನಪದ ನೃತ್ಯದ ಸ್ಪರ್ಧೆಯಲ್ಲಿ ರಂಜಿತಾ, ಸಾವಿತ್ರಿ, ಐಶ್ವರ್ಯ, ವೈಶಾಲಿ, ಸಂಗೀತಾ ಸ್ಫೂರ್ತಿ, ಭಾವಗೀತೆ ಸ್ಪರ್ಧೆಯಲ್ಲಿ ರೇಖಾ ಮಂಕಣಿ ಆಯ್ಕೆಯಾಗಿದ್ದಾರೆ.
ಶಾಲೆಯ ಮುಖ್ಯಗುರುಮಾತೆ ಸೀಮಾ ಹರಿಕಾಂತ್ರ, ಅಧ್ಯಕ್ಷ ಸೋಮು ಸಾಗರ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.