ಮುಳಬಾಗಿಲು: ನಗರದ ಸುಂಕು ಅಶ್ವತ್ಥನಾರಾಯಣಶೆಟ್ಟಿ ಬಡಾವಣೆಯಲ್ಲಿ ಜು.14ರಂದು ನಡೆದಿದ್ದ ಶಿಕಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಳಬಾಗಿಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸಿಸಿಟಿವಿಯಲ್ಲಿ ಶಂಕಿತ ಹಂತಕರ ಸುಳಿವು ಸಿಕ್ಕಿದೆ.
ಶಿಕ್ಷಕಿ ದಿವ್ಯಶ್ರೀ (46) ರಾತ್ರಿ ಟಿವಿ ನೋಡುತ್ತ ಕುಳಿತಿದ್ದಾಗ ಮನೆಗೆ ನುಗ್ಗಿದ ಹಂತಕರು, ಶಿಕ್ಷಕಿಯ ಕತ್ತು ಕೊಯ್ದು ಪರಾರಿಯಾಗಿದ್ದರು. ಹಂತಕರ ಜಾಡು ಹಿಡಿದ ಪೊಲೀಸರು ಎಲ್ಲ ಕಡೆಯೂ ಶೋಧ ನಡೆಸಿದ್ದು, ತಾಂತ್ರಿಕ ಸಾಕ್ಷ$್ಯಗಳನ್ನೂ ಸಂಗ್ರಹಿಸುತ್ತಿದ್ದಾರೆ. ಶ್ರೀಮಂತರೇ ತುಂಬಿರುವ ಬಡಾವಣೆಯಲ್ಲಿ ಭದ್ರತೆ ನಿಯೋಜಿಸಿಕೊಳ್ಳುವುದಿರಲಿ, ಕನಿಷ್ಠ ಗುಣಮಟ್ಟದ ಸಿಸಿ ಕ್ಯಾಮರಾಗಳನ್ನೂ ಅಳವಡಿಸಿಕೊಳ್ಳುವುದರಲ್ಲಿ ಬಡಾವಣೆ ನಿವಾಸಿಗಳು ರ್ನಿಲಕ್ಷ$್ಯವಹಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದಾಗ್ಯೂ, ಟನೆ ನಡೆದ ಸ್ಥಳದಿಂದ ಕೆಲ ದೂರದಲ್ಲಿರುವ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಶಂಕಿತರ ಚಲವಲನ ಸೆರೆಯಾಗಿದೆ. ಮೊಬೈಲ್ ಟವರ್ ಆಧಾರವನ್ನಿಟ್ಟುಕೊಂಡು ಆರೋಪಿಗಳ ಪತ್ತೆಗೆ ಮುಂದಾಗಿದ್ದ ಪೊಲೀಸರಿಗೆ ಈ ದೃಶ್ಯಾವಳಿಯಿಂದ ಮಹತ್ವದ ಸುಳಿವು ಸಿಕ್ಕಿವೆ ಎನ್ನಲಾಗಿದೆ. ಕೊಲೆ ನಡೆದ ಮನೆಯಲ್ಲಿ ಸಿಕ್ಕ ಬೆರಳಚ್ಚು, ಮತ್ತಿತರ ಸಾಗಳು ಕೊಲೆಗಡುಕರ ಪತ್ತೆಗೆ ಸಹಕಾರಿಯಾಗಿದ್ದರೂ ಕೊಲೆಯ ಸೂತ್ರಧಾರಿ ಪತ್ತೆಗೆ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕೊಲೆ ನಡೆದ ಮನೆ ಸುತ್ತಲೂ ಪೊಲೀಸರು ಪಟ್ಟಿ ಕಟ್ಟಿ ಸಾ ನಾಶಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಶಂಕಿತ 6 ಜನರ ಚಲನವಲನ ಟನೆ ನಡೆದ ಆಸುಪಾಸು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹದಿಹರೆಯದ 6 ಯುವಕರು ನಡೆದುಕೊಂಡು ಹೋಗುತ್ತಿರುವುದು, ಕೊಲೆ ಮಾಡಿದ ನಂತರ ಇಬ್ಬರೇ ವಾಪಸ್ ಆಗುತ್ತಿರುವ ದೃಶ್ಯಗಳು ಕಂಡುಬಂದಿವೆ. ಬಡಾವಣೆಯ ಮುಂಭಾಗ ದ್ವಿಚಕ್ರ ವಾಹನಗಳಲ್ಲಿ ವಾಪಸ್ ತೆರಳಿರುವ ದೃಶ್ಯಗಳು ಸೆರೆಯಾಗಿದ್ದು, ಚಹರೆಗಳು ಅಸ್ಪಷ್ಟವಾಗಿದ್ದರೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. 6 ಆರೋಪಿಗಳು ಮುಳಬಾಗಿಲು ಗ್ರಾಮೀಣ ಪ್ರದೇಶದವರು ಎಂದು ಗುರುತಿಸಿದ್ದು, ಆಂಧ್ರಪ್ರದೇಶದಲ್ಲಿ ಬಂಧನಕ್ಕೆ ಬಲೆ ಬೀಸಿದ್ದಾರೆ.
5 ಆಯಾಮ 4 ತಂಡ: ಶಿಕ್ಷಕಿ ಕೊಲೆ ಭೀಕರವಾಗಿದ್ದು, ಕುತ್ತಿಗೆ ಕೊಯ್ದಿದ್ದು ಅಲ್ಲದೆ ಚಾಕುನಿಂದ ಎದೆ ಹೊಟ್ಟೆ ಬೆನ್ನು ಹಿಂಭಾಗಗಳಲ್ಲಿ ಇರಿದಿದ್ದಾರೆ. ಈ ರೀತಿ ಕೊಲೆ ಮಾಡಿರುವ ಆರೋಪಿಗಳ ಜಾಡನ್ನು ಪೊಲೀಸರು ಕಲೆಹಾಕುತ್ತಿರುವ ಜತೆಗೆ ಕೊಲೆಯಾದ ಸ್ಥಳದೊಂದಿಗೆ ಮುಳಬಾಗಿಲು ನಗರ, ಬಂಗಾರಪೇಟೆ, ಚಿಂತಾಮಣಿ, ಬೆಂಗಳೂರು ಹಾಗೂ ಪಕ್ಕದ ಆಂಧ್ರದ ಕೆಲವೊಂದು ಕಡೆ ಪೊಲೀಸ್ ತಂಡಗಳು ಹಂತಕರ ಬಂಧನಕ್ಕೆ ಬಲೆ ಬೀಸಿವೆ.