

ಮಡಿಕೇರಿ:
ರೋಟರಿ ಮಡಿಕೇರಿ ಸಂಸ್ಥೆಯಿAದ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಗುರುವಾರ ಇಂರ‍್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ ನಡೆಯಿತು. ಸರ್ಕಾರಿ ಪದವಿ ಪೂರ್ವ ಕಾಲೇಜ್ ಇಂರ‍್ಯಾಕ್ಟ್ ಕ್ಲಬ್ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ ಮಿಥುನ್ ಪೂವಯ್ಯ ಮತ್ತು ಕಾರ್ಯದರ್ಶಿಯಾಗಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಕೆ.ಅನುಷಾ ಅಧಿಕಾರ ಸ್ವೀಕರಿಸಿದರು.
ಡಾ.ಕೆ.ರವಿ ಅಪ್ಪಾಜಿ ಪದಗ್ರಹಣ ಅಧಿಕಾರಿಯಾಗಿ ಪಾಲ್ಗೊಂಡು ಕ್ಲಬ್‌ನ 25 ಸದಸ್ಯರುಗಳಿಗೆ ಪ್ರಮಾಣ ವಚನ ಬೋಧಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ತಾಳ್ಮೆ ರೂಢಿಸಿಕೊಂಡರೆ ಆತ್ಮಸ್ಥೆöÊರ್ಯ ಹೆಚ್ಚಾಗಿ ಮುಂದೆ ಎದುರಾಗಬಹುದಾದ ಎಲ್ಲಾ ಕಷ್ಟಗಳನ್ನು ಎದುರಿಸಬಹುದಾಗಿದೆ. ಪ್ರಪಂಚದ ಅತ್ಯಂತ ಯಶಸ್ವಿ ವ್ಯಕ್ತಿಗಳು ಜೀವನದಲ್ಲಿ ತಾಳ್ಮೆಯಿಂದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುವ ಸತ್ಯವನ್ನು ಅಮೆರಿಕದ ಸ್ಟೆಂಡ್‌ಫರ್‌ಡ್ ವಿಶ್ವವಿದ್ಯಾನಿಲಯ ನಡೆಸಿದÀ ಸಂಶೋಧನೆ ಬಹಿರಂಗಪಡಿಸಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಅಧ್ಯಕ್ಷÀ ಎಂ. ಸುದಯ್ ನಾಣಯ್ಯ, 1950 ರಲ್ಲಿ ರೋಟರಿ ಸಂಸ್ಥೆ ಸ್ಥಾಪನೆಯಾಗಿದೆ, ರೋಟರಿ ಮೂಲಕ ಅದರ ಸದಸ್ಯರು ತಾವು ಬೆಳೆದು ಬಂದ ಪರಿಸರಕ್ಕೆ ತಮ್ಮ ಕೈಯಲ್ಲಾದ ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ವಿಜಯ್ ಮಾತನಾಡಿ, ವಿದ್ಯಾರ್ಥಿಗಳು ಸಮಾಜಮುಖಿ ಚಿಂತನೆಗಳನ್ನು ರೂಢಿಸಿಕೊಂಡು ಇಂರ‍್ಯಾಕ್ಟ್ ಕ್ಲಬ್ ಮೂಲಕÀ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಯೂತ್ ಸರ್ವಿಸ್ ಡೆರೆಕ್ಟರ್ ಕೆ.ಸಿ.ಕಾರ್ಯಪ್ಪ, ರೋಟರೆಕ್ಟ್ ಚೇರ್‌ಮೆನ್ ಸಿ.ಟಿ.ಮಂದಣ್ಣ, ಲಲಿತಾ ರಾಘವನ್, ಎನ್.ಪಿ. ಚೀಯಣ್ಣ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇಂರ‍್ಯಾಕ್ಟ್ ಕ್ಲಬ್‌ನ ಸಂಯೋಜಕಿ ಸೋನಾ ಚೋಂದಮ್ಮ ಇದ್ದರು.