ತುಸು ಬಿಡುವು ನೀಡಿದ ಮಳೆರಾಯ

mkg
Published on

ನ್ಯಾಮತಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರವು ಮೋಡಕವಿದ ವಾತಾವರಣ ಮುಂದುವರಿದಿದೆ. ಬುಧವಾರ ರಾತ್ರಿ ನಿರಂತರ ಮಳೆ ಆಗಿದ್ದು ಗುರುವಾರ ಸ್ವಲ್ಪ ಮಟ್ಟಿಗೆ ಮಳೆ ಬಿಡುವು ನೀಡಿದ್ದರೂ ಮೋಡ ಕವಿದ ವಾತಾವರಣ, ಶೀತ ಗಾಳಿ ಮುಂದುವರಿದಿದೆ.

ಸತತ ಮಳೆ ಹಿನ್ನೆಲೆಯಲ್ಲಿ ತಾಲೂಕಿನ ಅಂಗನವಾಡಿ ಕೇಂದ್ರ ಮತ್ತು ಶಾಲೆಗಳಿಗೆ ಗುರುವಾರ ರಜೆ ನೀಡಲಾಗಿತ್ತು. ಶುಕ್ರವಾರ ಎಂದಿನಂತೆ ಶಾಲೆಗಳು ಇರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ನಂಜರಾಜ್ ತಿಳಿಸಿದ್ದಾರೆ.

ಮಳೆ ಮಾಹಿತಿ: ಬುಧವಾರ ತಾಲೂಕಿನ ಸವಳಂಗ 8.6 ಮಿ.ಮೀ., ಬೆಳಗುತ್ತಿ 8.6 ಮಿ.ಮೀ., ಗೋವಿನಕೋವಿ 5.2 ಮಿ.ಮೀ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net